ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಅನಿಶ್ಚಿತತೆ ಮತ್ತು ಕಚ್ಚಾ ತೈಲ ದರ ಏರಿಕೆಯ ಬೆನ್ನಲ್ಲೇ ದೇಶೀಯ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಶೇ 2ರಷ್ಟು ಕುಸಿದಿವೆ.

ವಿದೇಶಿ ಬಂಡವಾಳದ ನಿರಂತರ ಹೊರಹರಿವು ಮತ್ತು ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿರುವುದು ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.

ಷೇರುಗಳ ಭಾರಿ ಮಾರಾಟ ಭರಾಟೆ ಹಿನ್ನೆಲೆಯಲ್ಲಿ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್, 1,456.04 ಅಂಶಗಳಷ್ಟು ಅಥವಾ ಶೇ 1.92ರಷ್ಟು ಕುಸಿದು 74,559 ವಹಿವಾಟು ಅಂತ್ಯಗೊಳಿಸಿದರೆ, 50 ಷೇರುಗಳ ಎನ್ಎಸ್ಇ ನಿಫ್ಟಿ 436.30 ಅಂಶಗಳಷ್ಟು ಕುಸಿದು 23,379 ರಲ್ಲಿ ವಹಿವಾಟು ಅಂತ್ಯಗೊಳಿಸಿತು.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಟೆಕ್ ಮಹೀಂದ್ರ, ಅದಾನಿ ಪೋರ್ಟ್ಸ್, ಎಚ್ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೈಟನ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಅತಿ ಹೆಚ್ಚು ನಷ್ಟ ಕಂಡಿವೆ. ಈ ಪೈಕಿ ಸ್ಟೇಟ್ ಬ್ಯಾಂಕ್ ಇಂಡಿಯಾ ಮಾತ್ರ ಲಾಭ ಗಳಿಸಿದೆ.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾತೈಲ ದರವು ಶೇ 2.75ರಷ್ಟು ಹೆಚ್ಚಳವಾಗಿ ಬ್ಯಾರಲ್ಗೆ 107.1 ಡಾಲರ್ ಆಗಿದೆ.

ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 35 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟ 95.63ಕ್ಕೆ ತಲುಪಿದೆ.

ಯುದ್ಧ ಅಂತ್ಯಕ್ಕೆ ಇರಾನ್ ಕಳುಹಿಸಿದ್ದ ಪ್ರಸ್ತಾಪ ತಿರಸ್ಕರಿಸಿದ ಬಳಿಕ ಯುದ್ಧ ವಿರಾಮವು ದುರ್ಬಲವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ವಿನಿಮಯ ಕೇಂದ್ರದ ದತ್ತಾಂಶದ ಪ್ರಕಾರ, ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹8,437 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏಷ್ಯಾ ಷೇರುಪೇಟೆಗಳ ಪೈಕಿ, ದಕ್ಷಿಣ ಕೊರಿಯಾದ ಕಾಸ್ಪಿ, ಶಾಂಘೈನ ಎಸ್ಎಸ್ಇ ಕಾಪೊಸಿಟ್ ಇಂಡೆಕ್ಸ್ ಮತ್ತು ಹಾಂಗ್ಕಾಂಗ್ನ ಹ್ಯಾಂಗ್ಸೆಂಟ್ ಕುಸಿತ ದಾಖಲಿಸಿವೆ. ಜಪಾನ್ನ ನಿಕ್ಕಿ ಏರಿಕೆ ದಾಖಲಿಸಿದೆ.
.ಸನಾತನ ಧರ್ಮ ಜನರನ್ನು ವಿಭಜಿಸುತ್ತದೆ, ಅದನ್ನು ನಿರ್ಮೂಲನೆ ಮಾಡಬೇಕು: ಉದಯನಿಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.