ಕೊಲ್ಹಾರ: ‘ಅಖಂಡ ಬಸವನಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲೆಂದು ಈ ಭಾಗದಲ್ಲಿ ಒಂದು ಸಕ್ಕರೆ ಕಾರ್ಖಾನೆ ನಿರ್ಮಿಸಬೇಕೆಂಬ ಬಹುದಿನಗಳ ಕನಸು ನನಸಾಗುವ ಕಾಲ ಕೂಡಿಬಂದಿದೆ’ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.

ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಕಾಂಪ್ಲೆಕ್ಸ್ ನಲ್ಲಿ ನಿಡಗುಂದಿ ತಾಲ್ಲೂಕಿನ ಅಂಗಡಗೇರಿ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಕೊಲ್ಹಾರ ಕೇನ್ಸ್ ಲಿಮಿಟೆಡ್ ಅಂಗಡಗೇರಿ ಕಂಪನಿಯ ಸಕ್ಕರೆ ಅಭಿವೃದ್ಧಿ ಕಾರ್ಯಾಲಯ ಉದ್ಘಾಟಿಸಿ, ಕಂಪನಿಯ ಷೇರು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಭಾಗದ ರೈತರು ಬೆಳೆಯುವ ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಕಳಿಸಿಕೊಡುವುದು ಬಹಳ ಕಷ್ಟಕರವಾಗಿತ್ತು. ಅದನ್ನು ಅರಿತು ಕ್ಷೇತ್ರದ ಮಧ್ಯವರ್ತಿ ಅಂದರೆ ಬಸವನ ಬಾಗೇವಾಡಿ, ಮುದ್ದೇಬಿಹಾಳಮ ನಿಡಗುಂದಿ, ಕೊಲ್ಹಾರ ಮತ್ತು ಬಬಲೇಶ್ವರ ತಾಲ್ಲೂಕಿನ ಕೆಲವು ಹಳ್ಳಿಯ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದರು.

‘ಒಂದು ಷೇರಿಗೆ ಇಪ್ಪತ್ತೈದು ಸಾವಿರ ನಿಗದಿಪಡಿಸಿದ್ದು, ರೈತರು, ಉದ್ಯಮಿಗಳು, ವ್ಯಾಪಾರಸ್ಥರು ಷೇರನ್ನು ಪಡೆದುಕೊಂಡು ಕಾರ್ಖಾನೆಯ ಬೆಳವಣಿಗೆಗೆ ಸಹಕರಿಸಬೇಕು. ಏಪ್ರಿಲ್ ತಿಂಗಳ ಮೂವತ್ತು ಷೇರು ಪಡೆಯಲು ಕೊನೆಯ ದಿನವಾಗಿದ್ದು, ಪ್ರತಿಯೊಬ್ಬರೂ ಷೇರನ್ನು ಪಡೆಯಬೇಕು’ ಎಂದರು.

‘ಮುಳವಾಡ, ಮಸೂತಿ, ನಿಡಗುಂದಿ, ಕೊಲ್ಹಾರ, ಬಸವನ ಬಾಗೇವಾಡಿ ಇನ್ನಿತರ ಕಡೆ ಕಚೇರಿಗಳನ್ನು ತೆರೆಯಲಾಗಿದೆ. ತಮಗೆ ಸಮೀಪವಾಗುವ ಕೇಂದ್ರದಲ್ಲಿ ಷೇರು ಪಡೆಯುವ ಅವಕಾಶವಿದ್ದು, ಸರ್ವರೂ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಶರಣು ಸಾಹುಕಾರ ಮಾತಾಳಿ, ಶಿವಪ್ಪ ಹಂಗರಗಿ, ಸಗರೆಪ್ಪ ಮುರನಾಳ, ನಂದಬಸಪ್ಪ ಚೌಧರಿ, ಮೋಹನಗೌಡ ಪಾಟೀಲ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಚಂದ್ರಶೇಖರ ಬೆಳ್ಳುಬ್ಬಿ, ವೀರಭದ್ರ ಬಾಗಿ, ರಾಮಣ್ಣ ಉಪ್ಪಲದಿನ್ನಿ, ಚಿನ್ನಪ್ಪ ಗಿಡ್ಡಪ್ಪಗೋಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-26-407691703

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.