ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಬಿ ಆದೇಶ ರದ್ದುಪಡಿಸಿದ ಎಸ್‌ಎಟಿ

Last Updated 23 ಜನವರಿ 2023, 17:35 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಷೇರುಪೇಟೆಯು (ಎನ್‌ಎಸ್‌ಇ) ಕೊ–ಲೊಕೇಷನ್‌ ಪ್ರಕರಣದಲ್ಲಿ ಗಳಿಸಿದ ₹ 625 ಕೋಟಿ ಲಾಭವನ್ನು ಮರಳಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನೀಡಿದ್ದ ಆದೇಶವನ್ನು ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ರದ್ದು‍ಪಡಿಸಿದೆ.

ಎನ್‌ಎಸ್‌ಇ ಈ ಪ್ರಕರಣದಲ್ಲಿ ಪರಿಶೀಲನೆ ಪ್ರಕ್ರಿಯೆ ಸರಿಯಾಗಿ ನಡೆಸಿಲ್ಲದ ಕಾರಣಕ್ಕೆ ಸೆಬಿಗೆ ₹ 100 ಕೋಟಿ ಪಾವತಿ ಮಾಡಬೇಕು ಎಂದು ಎಸ್‌ಎಟಿ ಆದೇಶ ಹೇಳಿದೆ.

ಎನ್‌ಎಸ್‌ಇ ಆರಂಭಿಸಿದ ಕೊ–ಲೊಕೇಷನ್ ಸೌಲಭ್ಯವು ಷೇರು ಬ್ರೋಕರ್‌ಗಳಿಗೆ ತಮ್ಮ ಸರ್ವರ್‌ಗಳನ್ನು ಷೇರುಪೇಟೆಯಲ್ಲಿ ಇರಿಸಲು ಅವಕಾಶ ಕಲ್ಪಿಸುತ್ತದೆ. ಇದರ ಮೂಲಕ ಅವರು ಕೆಲವು ಬಗೆಯ ಷೇರು ವಹಿವಾಟುಗಳಲ್ಲಿ ವಿಳಂಬವಾಗುವುದನ್ನು ತಡೆಯಬಹುದು. ಈ ಸೇವೆಯಲ್ಲಿ ಕೆಲವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿತ್ತು ಎಂಬ ಆರೋಪ ಇದೆ. ಸಂಬಂಧಪಟ್ಟ ಯಾವುದೇ ನಿಯಮಗಳನ್ನು ಎನ್‌ಎಸ್‌ಇ ಉಲ್ಲಂಘಿಸಿಲ್ಲ ಎಂದು ಎಸ್‌ಎಟಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT