2026ನೇ ಹಣಕಾಸು ವರ್ಷದಲ್ಲಿ ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು(ಎನ್ಎಸ್ಇ) ಸಕ್ರಿಯ ಹೂಡಿಕೆದಾರರಲ್ಲಿ ದಾಖಲೆಯ ಕುಸಿತವನ್ನು ಕಂಡಿದೆ. ಈ ವರ್ಷದಲ್ಲಿ ಸುಮಾರು 35 ಲಕ್ಷ ಖಾತೆಗಳು ರದ್ದಾಗಿದ್ದು, ಇದು ದಾಖಲೆಯ ಕುಸಿತವಾಗಿದೆ. ಪ್ರಮುಖ ಬ್ರೋಕರೇಜ್ ಕಂಪನಿಗಳಾದ ಜೆರೋಧಾ, ಏಂಜೆಲ್ ಒನ್ ಮತ್ತು ಅಪ್ಸ್ಟಾಕ್ಸ್ನಲ್ಲಿ ಹೂಡಿಕೆದಾರರ ತೀವ್ರ ಕುಸಿತ ಕಂಡುಬಂದಿದೆ.

ಎನ್ಎಸ್ಇಯ ಸಕ್ರಿಯ ಹೂಡಿಕೆದಾರರ ಸಂಖ್ಯೆಯು ಹಿಂದಿನ ವರ್ಷಕ್ಕಿಂತ ಶೇ 7 ರಷ್ಟು ಕುಸಿದಿದೆ. 2025ರಲ್ಲಿ 4.92 ಕೋಟಿಯಷ್ಟಿದ್ದ ಹೂಡಿಕೆದಾರರ ಖಾತಗೆಳ ಸಂಖ್ಯೆ 2026ರಲ್ಲಿ 4.58 ಕೋಟಿಗೆ ಇಳಿದಿದೆ. ಒಟ್ಟು ಕುಸಿತದಲ್ಲಿ ಶೇ 70ಕ್ಕಿಂತ ಹೆಚ್ಚು ಅಥವಾ ಸುಮಾರು 26 ಲಕ್ಷ ಖಾತೆಗಳ ಕುಸಿತವು ಜೆರೋಧಾ, ಏಂಜೆಲ್ ಒನ್ ಮತ್ತು ಅಪ್ಸ್ಟಾಕ್ಸ್ನಲ್ಲೇ ಆಗಿದೆ ಎಂದು ಮನಿ ಕಂಟ್ರೋ್ ವರದಿ ತಿಳಿಸಿದೆ.

9.95 ಲಕ್ಷ ಸಕ್ರಿಯ ಹೂಡಿಕೆದಾರರನ್ನು ಕಳೆದುಕೊಂಡ ಜೆರೋಧಾ ಅತಿ ಹೆಚ್ಚು ಖಾತೆಗಳನ್ನು ಕಳೆದುಕೊಂಡಿದೆ. ಇದು ಒಟ್ಟಾರೆ ಕುಸಿತದ ಶೇ. 29 ರಷ್ಟಿದೆ. ಶೇ 23ರಷ್ಟು ಗ್ರಾಹಕರನ್ನು ಕಳೆದುಕೊಂಡಿರುವ ಏಂಜೆಲ್ ಒನ್ 8.15 ಲಕ್ಷ ಖಾತೆಗಳನ್ನು ಕಳೆದುಕೊಂಡರೆ, ಅಪ್ಸ್ಟಾಕ್ಸ್ 7.6 ಲಕ್ಷ ಖಾತೆಗಳ ಕುಸಿತದೊಂದಿಗೆ ಶೇ 22 ರಷ್ಟು ಹೂಡಿಕೆದಾರರನ್ನು ಕಳೆದುಕೊಂಡಿದೆ.

ಇತರ ಬ್ರೋಕರೇಜ್ ಕಂಪನಿಗಳ ಖಾತೆಗಳಲ್ಲೂ ಸಕ್ರಿಯ ಕುಸಿತ ವರದಿಯಾಗಿದೆ. ಮಿರೇ ಅಸೆಟ್ ಕ್ಯಾಪಿಟಲ್ ಮಾರ್ಕೆಟ್ಸ್ ಸುಮಾರು 2.72 ಲಕ್ಷ ಖಾತೆಗಳನ್ನು ಕಳೆದುಕೊಂಡರೆ, ಎಚ್ಡಿಎಫ್ಸಿ ಸೆಕ್ಯುರಿಟೀಸ್ ಮತ್ತು ಶೇರ್ಖಾನ್ ತಲಾ 1.3 ಲಕ್ಷ ಖಾತೆಗಳನ್ನು ಕಳೆದುಕೊಂಡಿವೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್, ಕೋಟಕ್ ಸೆಕ್ಯುರಿಟೀಸ್ ಮತ್ತು 5 ಪೈಸಾ ಕ್ಯಾಪಿಟಲ್ ಸಹ ಕ್ರಮವಾಗಿ 1.13 ಲಕ್ಷ, 1.1 ಲಕ್ಷ ಮತ್ತು 90,000ಕ್ಕೂ ಹೆಚ್ಚು ಹೂಡಿಕೆದಾರರ ನಷ್ಟವನ್ನು ಕಂಡಿವೆ.

ಈ ವರ್ಷ ಭಾರತೀಯ ಮಾರುಕಟ್ಟೆಗಳಲ್ಲಿ ದೀರ್ಘಕಾಲದ ಏರಿಳಿತದಿಂದ ಈ ಕುಸಿತ ಕಂಡುಬಂದಿದೆ. ಕಾರ್ಪೊರೇಟ್ ಗಳಿಕೆಯಲ್ಲಿನ ಇಳಿಕೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಷೇರು ಮಾರಾಟವು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ವ್ಯಾಪಾರ ಯುದ್ಧ ಮತ್ತು ಇತ್ತೀಚಿನ ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷ ಸೇರಿದಂತೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಿದವು ಎಂದು ವರದಿ ತಿಳಿಸಿದೆ.

ದುರ್ಬಲ ಮಾರುಕಟ್ಟೆ ವಾತಾವರಣವು ಸಹ ಮಾರುಕಟ್ಟೆಗೆ ಹೊಡೆತ ನೀಡಿದೆ. ಹಲವು ಐಪಿಒಗಳು ನಿರೀಕ್ಷಿತ ಲಾಭ ತಂದುಕೊಡಲಿಲ್ಲ. ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚುತ್ತಿರುವುದು, ಹಣದುಬ್ಬರ, ಹಣಕಾಸಿನ ಒತ್ತಡಗಳು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯ ಬಗ್ಗೆ ಕಳವಳಗಳನ್ನು ಹೆಚ್ಚಿಸಿವೆ. ಭಾರತದಲ್ಲಿ ದೊಡ್ಡ ಪ್ರಮಾಣದ ಕೃತಕ ಬುದ್ಧಿಮತ್ತೆ-ಸಂಬಂಧಿತ ಹೂಡಿಕೆ ಕೊರತೆಯು ವಿದೇಶಿ ಹೂಡಿಕೆದಾರರ ಆಸಕ್ತಿಯನ್ನು ಸೀಮಿತಗೊಳಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.