ನವದೆಹಲಿ (ಪಿಟಿಐ): 2025–26ರ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ₹19,684 ಕೋಟಿ ನಿವ್ವಳ ಲಾಭ ಗಳಿಸಿದೆ.

2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹18,643 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 6ರಷ್ಟು ಹೆಚ್ಚಳವಾಗಿದೆ. ವಸೂಲಾಗದ ಸಾಲದ ಪ್ರಮಾಣ ಕಡಿಮೆ ಆಗಿದೆ. ಇದು ಲಾಭ ಹೆಚ್ಚಳಕ್ಕೆ ಒಂದು ಕಾರಣ ಎಂದು ಬ್ಯಾಂಕ್ ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.

ಬ್ಯಾಂಕ್ನ ವರಮಾನವು ₹1.43 ಲಕ್ಷ ಕೋಟಿಯಿಂದ ₹1.40 ಲಕ್ಷ ಕೋಟಿಗೆ ಇಳಿದಿದೆ. ಬಡ್ಡಿ ವರಮಾನವು ₹1.23 ಲಕ್ಷ ಕೋಟಿಯಷ್ಟಾಗಿದೆ. ವಸೂಲಾಗದ ಸಾಲದ ಪ್ರಮಾಣ (ಜಿಎನ್ಪಿಎ) ಶೇ 1.82ರಿಂದ ಶೇ 1.49ಕ್ಕೆ ಇಳಿದಿದೆ. ನಿವ್ವಳ ಎನ್ಪಿಎ ಶೇ 0.47ರಿಂದ ಶೇ 0.39ಕ್ಕೆ ಇಳಿದಿದೆ.

2025–26ರ ಪೂರ್ಣ ಆರ್ಥಿಕ ವರ್ಷದಲ್ಲಿ ಬ್ಯಾಂಕ್ನ ಲಾಭದಲ್ಲಿ ಶೇ 13ರಷ್ಟು ಏರಿಕೆಯಾಗಿದ್ದು, ₹80,032 ಕೋಟಿಯಾಗಿದೆ. 2024–25ರ ಇದೇ ಅವಧಿಯಲ್ಲಿ ಇದು ₹70,901 ಕೋಟಿಯಷ್ಟಿತ್ತು.

₹1 ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ₹17.35 ಲಾಭಾಂಶ ನೀಡಲು ಬ್ಯಾಂಕ್ನ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ. ಅರ್ಹ ಸದಸ್ಯರು ಜೂನ್ 4ರಂದು ಲಾಭಾಂಶ ಪಡೆಯಲಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ.

ಷೇರಿನ ಮೌಲ್ಯ ಇಳಿಕೆ: ಹೂಡಿಕೆದಾರರ ನಿರೀಕ್ಷೆಯಂತೆ ಬ್ಯಾಂಕ್ನ ಫಲಿತಾಂಶ ಬಾರದಿದ್ದಕ್ಕೆ ಎಸ್ಬಿಐನ ಷೇರಿನ ಮೌಲ್ಯವು ಶೇ 7ರವರೆಗೆ ಇಳಿದಿದೆ. ಇದರಿಂದ ಬ್ಯಾಂಕ್ನ ಮಾರುಕಟ್ಟೆ ಬಂಡವಾಳ ಮೌಲ್ಯ ₹66,691 ಕೋಟಿ ಕರಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1691720255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.