ಮುಂಬೈ: ಸತತ ಮೂರನೇ ದಿನವೂ ಭಾರತೀಯ ಷೇರುಪೇಟೆಗಳಲ್ಲಿ ಕುಸಿತ ಕಂಡುಬಂದಿದೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 1,092 ಅಂಶಗಳಷ್ಟು ಕುಸಿದಿದ್ದು, ಎನ್ಎಸ್ಇ ನಿಫ್ಟಿ 24,550ಕ್ಕೆ ಬಂದಿದೆ.

ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಕಡಿಮೆ ಸಾಧ್ಯತೆ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಈ ಕುಸಿತ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಷೇರುಪೇಟೆಯ ವಹಿವಾಟು ಅಂತ್ಯದಲ್ಲಿ ಮಾರಾಟ ಭರಾಟೆ ಹೆಚ್ಚಿದ್ದರಿಂದ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 1,092.06 ಅಂಶ ಕುಸಿದು 74,775.74ರಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ದಿನದ ವಹಿವಾಟಿನ ಸಮಯದಲ್ಲಿ 1,278.69 ಅಂಶಗಳಷ್ಟು ಕುಸಿತ ಕಂಡಿತ್ತು.

50 ಷೇರುಗಳ ಎನ್ಎಸ್ಇ ನಿಫ್ಟಿ 359.40 ಅಂಶಗಳಷ್ಟು ಕುಸಿದು 23,547ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಪವರ್ ಗ್ರಿಡ್, ಇಂಟರ್ಗ್ಲೋಬ್ ಏವಿಯೇಶನ್, ಎನ್ಟಿಪಿಸಿ, ಮಹೀಂದ್ರ ಅಂಡ್ ಮಹೀಂದ್ರ, ಟಾಟಾ ಸ್ಟೀಲ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಕುಸಿತ ದಾಖಲಿಸಿವೆ.

ಟೆಕ್ ಮಹೀಂದ್ರ, ಎಚ್ಸಿಎಲ್ ಟೆಕ್, ಎಲ್ ಅಂಡ್ ಟಿ ಮತ್ತು ಇನ್ಫೊಸಿಸ್ ಲಾಭ ಗಳಿಸಿವೆ.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಶೇ 1.52 ರಷ್ಟು ಕುಸಿದು ಪ್ರತಿ ಬ್ಯಾರಲ್ಗೆ 92.29 ಡಾಲರ್ ಆಗಿದೆ.

‘ಭೌಗೋಳಿಕ ರಾಜಕೀಯ ಅನಿಶ್ಚಿತತೆಯು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದೆ. ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ವಿರಾಮ ಮುಂದುವರಿಕೆಯ ಆರಂಭಿಕ ಸೂಚನೆ ಹೊರತಾಗಿಯೂ ಅಮೆರಿಕದಿಂದ ಸ್ಪಷ್ಟ ಉತ್ತರ ಬರದ ಹಿನ್ನೆಲೆಯಲ್ಲಿ ಜಾಗತಿಕ ಸಾಂಸ್ಥಿಕ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ’ ಎಂದು ಲೈವ್ಲಾಂಗ್ ವೆಲ್ತ್ ಸಂಸ್ಥಾಪಕ ಕೆ ಹರಿಪ್ರಸಾದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.