ಮುಂಬೈ: ದೇಶದ ಷೇರುಪೇಟೆಗಳ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರದ ವಹಿವಾಟಿನಲ್ಲಿ ತೀವ್ರ ಕುಸಿತ ದಾಖಲಿಸಿವೆ.

ಹೂಡಿಕೆದಾರರು ವಹಿವಾಟಿನ ಕೊನೆಯ ಹಂತದಲ್ಲಿ ಲಾಭ ಗಳಿಕೆಯ ಉದ್ದೇಶದಿಂದ ಹಣಕಾಸು, ತೈಲ ಮತ್ತು ಅನಿಲ ವಲಯದ ಷೇರುಗಳ ಮಾರಾಟಕ್ಕೆ ಮುಂದಾಗಿದ್ದುದು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಯಿತು.

ಸೆನ್ಸೆಕ್ಸ್ 1,092 ಅಂಶ, ನಿಫ್ಟಿ 359 ಅಂಶ ಕುಸಿತ ದಾಖಲಿಸಿವೆ. ಈ ಬಾರಿ ಮುಂಗಾರು ಮಳೆಯು ವಾಡಿಕೆಯ ಶೇ 90ರಷ್ಟು ಮಾತ್ರ ಆಗಲಿದೆ ಎಂಬ ಅಂದಾಜು ಕೂಡ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.

‘ಕೇಂದ್ರ ಹವಾಮಾನ ಇಲಾಖೆಯ ಮುಂಗಾರು ಮಳೆಯ ಪ್ರಮಾಣದ ಬಗ್ಗೆ ಮುನ್ಸೂಚನೆ ನೀಡಿದ ನಂತರದಲ್ಲಿ ಮಾರುಕಟ್ಟೆಯಲ್ಲಿ ಷೇರುಗಳ ಮಾರಾಟವು ಜೋರಾಯಿತು. ಮಳೆ ಪ್ರಮಾಣ ಕಡಿಮೆ ಆಗಬಹುದು ಎಂಬುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಮಳೆ ಕೊರತೆ ಹಾಗೂ ಎಲ್–ನಿನೊ ಪರಿಣಾಮವು ಮುಂದಿನ ದಿನಗಳಲ್ಲಿ ಆಹಾರ ಹಣದುಬ್ಬರ ಜಾಸ್ತಿ ಮಾಡಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ’ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 1.52ರಷ್ಟು ಇಳಿಕೆ ಕಂಡಿದ್ದು, ಬ್ಯಾರಲ್ಗೆ 92.99 ಡಾಲರ್ ಆಗಿದೆ.

ಸೂಚ್ಯಂಕಗಳ ಕುಸಿತದ ಪರಿಣಾಮವಾಗಿ ಶುಕ್ರವಾರ ಹೂಡಿಕೆದಾರರ ಸಂಪತ್ತು ₹5.77 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.