ಚಿಂತನ್ ಹಾರಿಯಾ

ಜಾಗತಿಕ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಹೂಡಿಕೆದಾರರಾದ ಬೆಂಜಮಿನ್ ಗ್ರಹಾಂ ಮತ್ತು ವಾರನ್ ಬಫೆಟ್ ಅವರ ಕೆಲಸಗಳಿಂದಾಗಿ ‘ವ್ಯಾಲ್ಯೂ ಇನ್ವೆಸ್ಟಿಂಗ್’ ವಿಧಾನವು ಜನಪ್ರಿಯತೆ ಗಳಿಸಿದೆ. ಈ ವಿಧಾನದಲ್ಲಿನ ಮೂಲ ಆಲೋಚನೆ ಕೂಡ ಬಹಳ ಸರಳವಾಗಿದೆ.

ಷೇರುಪೇಟೆ ಹೂಡಿಕೆ ಅಂದಾಕ್ಷಣ ‘ಇದನ್ನು ನಮ್ಮಿಂದ ನಿಭಾಯಿಸಲು ಸಾಧ್ಯವೇ’ ಎಂಬ ಭಾವನೆ ಹಲವರಲ್ಲಿ ತಕ್ಷಣಕ್ಕೆ ಮೂಡಬಹುದು. ಭಾರತದಲ್ಲಿ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿ ಸಂಖ್ಯೆ ಸಾವಿರಗಳ ಮಟ್ಟದಲ್ಲಿದೆ, ಮಾರುಕಟ್ಟೆಯಲ್ಲಿ ಸುದ್ದಿಗದ್ದಲ ಕೂಡ ನಿರಂತರವಾಗಿರುತ್ತದೆ. ಹೀಗಿರುವಾಗ ಸರಿಯಾದ ಕಂಪನಿಯ ಷೇರು ಆಯ್ಕೆ ಮಾಡುವುದು ಸುಲಭದ ಕೆಲಸ ಅಲ್ಲವೇ ಅಲ್ಲ.

ಭಾರತದಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಬಲಗೊಳ್ಳುತ್ತಿದೆ, ಪ್ಯಾಸಿವ್ ಹೂಡಿಕೆ ವಿಧಾನ ಕೂಡ ಜನಪ್ರಿಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಷೇರುಗಳ ಗುಣಮಟ್ಟ, ಅವುಗಳ ಮೌಲ್ಯ ಹಾಗೂ ಅವುಗಳ ಮೌಲ್ಯವರ್ಧನೆಯ ವೇಗವನ್ನು ಗಮನಿಸುವುದು ನಿರ್ದಿಷ್ಟವಾದ ಕೆಲವು ನಿಯಮಗಳಿಗೆ ಅನುಗುಣವಾಗಿ ಈಕ್ವಿಟಿಗಳಲ್ಲಿ ಹಣ ತೊಡಗಿಸಲು ಬಯಸುವ ಹೂಡಿಕೆದಾರರ ನಡುವೆ ಜನಪ್ರಿಯವಾಗುತ್ತಿದೆ.

ಷೇರುಗಳ ಮೌಲ್ಯವನ್ನು ಆಧರಿಸಿ ರೂಪುಗೊಂಡಿರುವ ಒಂದು ಸೂಚ್ಯಂಕದ ಹೆಸರು ‘ನಿಫ್ಟಿ 200 ವ್ಯಾಲ್ಯೂ 30’. ಷೇರುಗಳ ಮೌಲ್ಯವನ್ನು ಆಧರಿಸಿ, ನಿರ್ದಿಷ್ಟವಾದ ಅನುಪಾತಗಳನ್ನು ಗಮನಿಸಿ ಹೂಡಿಕೆ ಮಾಡಲು ಬಯಸುವವರಿಗೆ ಈ ಸೂಚ್ಯಂಕವು ಪರಿಣಾಮಕಾರಿ ಆಯ್ಕೆಯಾಗಿದೆ.

ದೇಶದ ಷೇರುಪೇಟೆಯಲ್ಲಿ ಬೇರೆ ಬೇರೆ ಕಂಪನಿಗಳ ಷೇರುಗಳ ಜೊತೆ ಹೋಲಿಸಿದಾಗ ಆಕರ್ಷಕವಾದ ಮೌಲ್ಯಕ್ಕೆ ಲಭ್ಯವಿರುವ ಕಂಪನಿಗಳ ಮೇಲೆ ಹಣ ತೊಡಗಿಸಲು ಅನುಕೂಲ ಆಗುವ ರೀತಿಯಲ್ಲಿ ‘ನಿಫ್ಟಿ 200 ವ್ಯಾಲ್ಯೂ 30 ಸೂಚ್ಯಂಕ’ವನ್ನು ರೂಪಿಸಲಾಗಿದೆ. ಈ ಸೂಚ್ಯಂಕದಲ್ಲಿ ‘ನಿಫ್ಟಿ 200 ಸೂಚ್ಯಂಕ’ದಿಂದ ಆಯ್ಕೆ ಮಾಡಿದ 30 ಕಂಪನಿಗಳ ಪ್ರಾತಿನಿಧ್ಯ ಇದೆ. ಆ ಮೂವತ್ತು ಕಂಪನಿಗಳನ್ನು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಪಿ.ಇ. ಅನುಪಾತ: ಅಂದರೆ ಪ್ರತಿ ₹1 ಗಳಿಕೆಗೆ ಹೂಡಿಕೆದಾರರು ಎಷ್ಟು ರೂಪಾಯಿ ವೆಚ್ಚ ಮಾಡುತ್ತಿದ್ದಾರೆ ಎಂಬುದನ್ನು ಇದು ಹೇಳುತ್ತದೆ.

ಪಿ.ಬಿ. ಅನುಪಾತ: ಇದು ಷೇರುಮೌಲ್ಯ ಹೆಚ್ಚಿದೆಯೋ, ಕಡಿಮೆಯೋ ಎಂಬುದನ್ನು ತಿಳಿಸುತ್ತದೆ

ಲಾಭಾಂಶದ ಪ್ರಮಾಣ: ಕಂಪನಿಯು ತನ್ನ ಲಾಭದಲ್ಲಿ ಹೂಡಿಕೆದಾರರಿಗೆ ವಿತರಿಸುವ ಪಾಲು

ಪಿ.ಎಸ್. ಅನುಪಾತ: ಕಂಪನಿಯ ಮಾರುಕಟ್ಟೆ ಮೌಲ್ಯ ಹಾಗೂ ವಾರ್ಷಿಕ ವರಮಾನದ ನಡುವಿನ ಅನುಪಾತವನ್ನು ಹೇಳುತ್ತದೆ

ಹಣಕಾಸಿನ ಸಾಧನೆಗೆ ಹೋಲಿಕೆ ಮಾಡಿದಾಗ, ಮೌಲ್ಯವು ದುಬಾರಿ ಆಗಿರದ ಷೇರುಗಳನ್ನು ಆಯ್ಕೆ ಮಾಡುವ ಗುರಿಯನ್ನು ‘ನಿಫ್ಟಿ 200 ವ್ಯಾಲ್ಯೂ 30 ಸೂಚ್ಯಂಕ’ ಹೊಂದಿದೆ. ಇದು ಹೂಡಿಕೆದಾರರಿಗೆ ಹಲವು ಪ್ರಯೋ ಜನಗಳನ್ನು ಒದಗಿಸಿಕೊಡುತ್ತದೆ. ಹೂಡಿಕೆದಾರರು ಇಂತಹ ಷೇರುಗಳನ್ನು ತಾವಾಗಿಯೇ ಆಯ್ಕೆ ಮಾಡಲು ಮುಂದಾದಾಗ ತಮ್ಮಲ್ಲಿ ವಸ್ತುನಿಷ್ಠ ನೋಟದ ಕೊರತೆಯಿಂದಾಗಿ ಉಂಟಾಗಬಹುದಾದ ಲೋಪಗಳನ್ನು ನಿವಾರಿಸಲು ಈ ಸೂಚ್ಯಂಕವು ಸಹಾಯ ಮಾಡುತ್ತದೆ. ಆರ್ಥಿಕ ಸ್ಥಿತಿ, ವಹಿವಾಟು ಬಹಳ ಗಟ್ಟಿಮುಟ್ಟಾಗಿದ್ದರೂ ಬಂಡವಾಳ ಮಾರುಕಟ್ಟೆಯಲ್ಲಿ ಕಡಿಮೆ ಮೌಲ್ಯಕ್ಕೆ ಲಭ್ಯವಿರುವ ಕಂಪನಿಯ ಷೇರುಗಳಲ್ಲಿ ಹಣ ತೊಡಗಿಸಲು ಈ ಸೂಚ್ಯಂಕವು ಅವಕಾಶ ಮಾಡಿಕೊಡುತ್ತದೆ.

ಈ ಸೂಚ್ಯಂಕವನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ, ಹೊಸ ಷೇರುಗಳನ್ನು ಸೇರ್ಪಡೆ ಮಾಡುವ, ಹಳೆಯ ಕೆಲವನ್ನು ಅಲ್ಲಿಂದ ತೆಗೆಯುವ ಕೆಲಸ ಕೂಡ ಆಗುತ್ತಿರುತ್ತದೆ.

‘ವ್ಯಾಲ್ಯೂ ಇನ್ವೆಸ್ಟಿಂಗ್’

ಷೇರುಪೇಟೆಗಳಲ್ಲಿ ‘ವ್ಯಾಲ್ಯೂ ಇನ್ವೆಸ್ಟಿಂಗ್’ ಬಗ್ಗೆ ಬಹಳಷ್ಟು ಚರ್ಚೆಗಳು ಆಗಿವೆ, ಹೂಡಿಕೆಯ ಈ ವಿಧಾನದ ಬಗ್ಗೆ ಬಹಳಷ್ಟು ಅಧ್ಯಯನಗಳು ಆಗಿವೆ. ಜಾಗತಿಕ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಹೂಡಿಕೆದಾರರಾದ ಬೆಂಜಮಿನ್ ಗ್ರಹಾಂ ಮತ್ತು ವಾರನ್ ಬಫೆಟ್ ಅವರ ಕೆಲಸಗಳಿಂದಾಗಿ ಈ ಹೂಡಿಕೆ ವಿಧಾನವು ಜನಪ್ರಿಯತೆ ಗಳಿಸಿದೆ. ಇಲ್ಲಿ ಮೂಲ ಆಲೋಚನೆ ಬಹಳ ಸರಳವಾಗಿದೆ: ಬಹಳ ಉತ್ತಮವಾದ ಕಂಪನಿಗಳ ಷೇರುಗಳು ಸೂಕ್ತವಾದ ಬೆಲೆಗೆ ಅಥವಾ ಕಡಿಮೆ ಬೆಲೆಗೆ ಸಿಗುವಾಗ ಅವುಗಳನ್ನು ಖರೀದಿಸಬೇಕು ಎಂಬುದು ಆ ಆಲೋಚನೆ.

ಬಂಡವಾಳ ಮಾರುಕಟ್ಟೆಗಳು ಬಹಳ ಸಂದರ್ಭಗಳಲ್ಲಿ ಚಕ್ರೀಯ ಗತಿಯಲ್ಲಿ ಸಾಗುತ್ತಿರುತ್ತವೆ. ಕೆಲವು ಸಂದರ್ಭಗಳಲ್ಲಿ ಭಾರಿ ಪ್ರಮಾಣದ ಮೌಲ್ಯವರ್ಧನೆಯ ಸಾಧ್ಯತೆ ಇರುವ ಷೇರುಗಳು ಮುನ್ನೆಲೆಗೆ ಬಂದಿರುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ ಹೂಡಿಕೆದಾರರು ಬಹಳ ಉತ್ತಮವಾದ ಆರ್ಥಿಕ ಸ್ಥಿತಿ ಹಾಗೂ ಸ್ಥಿರವಾದ ಪ್ರಮಾಣದಲ್ಲಿ ಹಣದ ಹರಿವು ಇರುವ ಕಂಪನಿಗಳನ್ನು ಅರಸುತ್ತಾರೆ. ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ಹಾಗೂ ಸ್ಥಿರ ಪ್ರಮಾಣದ ಹಣದ ಹರಿವು ಇರುವ ಕಂಪನಿಗಳನ್ನು ಗುರುತಿಸಿ, ಅವುಗಳ ಷೇರು ಖರೀದಿಸಲು ‘ವ್ಯಾಲ್ಯೂ’ ಆಧಾರಿತ ಹೂಡಿಕೆ ವಿಧಾನವು ಯತ್ನಿಸುತ್ತದೆ.

‘ನಿಫ್ಟಿ 200 ವ್ಯಾಲ್ಯೂ 30 ಸೂಚ್ಯಂಕ’ವು ಈ ತತ್ತ್ವವನ್ನು ನಿಯಮ ಆಧಾರಿತ ಚೌಕಟ್ಟೊಂದರ ಮೂಲಕ ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತದೆ. ನಿಫ್ಟಿ 200 ಸೂಚ್ಯಂಕದ ಭಾಗವಾಗಿರುವ ಕಂಪನಿಗಳ ಪೈಕಿ, ‘ವ್ಯಾಲ್ಯೂ’ ಮಾನದಂಡಗಳಲ್ಲಿ ಹೆಚ್ಚಿನ ಅಂಕ ಪಡೆಯುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಇಟಿಎಫ್ ಹಾಗೂ ಇಂಡೆಕ್ಸ್ ಫಂಡ್ಗಳು ಈ ವಿಧಾನಕ್ಕೆ ಅನುಗುಣವಾಗಿ ಹಣ ತೊಡಗಿಸಲು ನೆರವಾಗುತ್ತವೆ. ಹೂಡಿಕೆದಾರರು ‘ನಿಫ್ಟಿ 200 ವ್ಯಾಲ್ಯೂ 30 ಸೂಚ್ಯಂಕ’ದಲ್ಲಿ ಎರಡು ಬಗೆಗಳಲ್ಲಿ – ಅಂದರೆ ಇಟಿಎಫ್ ಹಾಗೂ ಇಂಡೆಕ್ಸ್ ಫಂಡ್ ಮೂಲಕ – ಹೂಡಿಕೆ ಮಾಡಬಹುದು.

ಇಟಿಎಫ್ ಮಾರ್ಗ: ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳು (ಇಟಿಎಫ್) ದೇಶದ ಷೇರುಪೇಟೆಗಳಲ್ಲಿ ಷೇರುಗಳ ಮಾದರಿಯಲ್ಲಿಯೇ ಖರೀದಿ, ಮಾರಾಟ ಆಗುತ್ತವೆ. ಹೂಡಿಕೆದಾರರು ತಮ್ಮ ಡಿಮ್ಯಾಟ್ ಖಾತೆಯನ್ನು ಬಳಸಿ ಇವುಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಪಾರದರ್ಶಕ ಹೂಡಿಕೆ ಅವಕಾಶ ಕಲ್ಪಿಸುವುದು, ಬಹಳ ಕಡಿಮೆ ಪ್ರಮಾಣದ ಶುಲ್ಕವನ್ನು ಪಡೆಯುವುದು ಇಟಿಎಫ್ಗಳ ಹೆಚ್ಚುಗಾರಿಕೆ.

ಇಂಡೆಕ್ಸ್ ಫಂಡ್: ಇವು ಸೂಚ್ಯಂಕವನ್ನು ಅನುಕರಣೆ ಮಾಡುತ್ತವೆ. ಆದರೆ ಇವು ಸಾಂಪ್ರದಾಯಿಕ ಮ್ಯೂಚುವಲ್ ಫಂಡ್ಗಳ ಮಾದರಿಯಲ್ಲಿಯೇ ಇರುತ್ತವೆ. ಡಿಮ್ಯಾಟ್ ಖಾತೆಯನ್ನು ಬಳಸುವ ಅಗತ್ಯ ಇಲ್ಲದೆ ಹೂಡಿಕೆದಾರರು ಈ ಬಗೆಯ ಫಂಡ್ಗಳ ಮೂಲಕ ಹಣ ತೊಡಗಿಸಬಹುದು. ಸೂಚ್ಯಂಕದ ಭಾಗವಾಗಿರುವ ಷೇರುಗಳಲ್ಲಿ ಹಣ ತೊಡಗಿಸಲು ಇವೆರಡೂ ಆಯ್ಕೆಗಳು ದಾರಿ ಮಾಡಿಕೊಡುತ್ತವೆ.

‘ನಿಫ್ಟಿ 200 ವ್ಯಾಲ್ಯೂ 30 ಸೂಚ್ಯಂಕ’ ಆಧಾರಿತ ಇಟಿಎಫ್ ಅಥವಾ ಈ ಸೂಚ್ಯಂಕದ ಮೇಲೆ ಹಣ ತೊಡಗಿಸುವ ಫಂಡ್ಗಳು ಹೂಡಿಕೆಯಲ್ಲಿ ವೈವಿಧ್ಯ ಸಾಧಿಸಲು ಅವಕಾಶ ನೀಡುವ, ಹೂಡಿಕೆಯಲ್ಲಿ ಶಿಸ್ತು ಸಾಧಿಸಲು ಅನುವು ಮಾಡಿಕೊಡುವ ಹಾಗೂ ವೆಚ್ಚವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ದಾರಿ ಮಾಡಿಕೊಡುವ ಕಾರಣಕ್ಕಾಗಿ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ.

ಮೊದಲನೆಯದಾಗಿ, ಈ ಸೂಚ್ಯಂಕವು ನಿಫ್ಟಿ–200 ಸೂಚ್ಯಂಕವನ್ನು ಆಧರಿಸಿದೆ. ನಿಫ್ಟಿ–200 ಸೂಚ್ಯಂಕವು ಬೇರೆ ಬೇರೆ ವಲಯಗಳಿಗೆ ಸೇರಿದ ಮಿಡ್ಕ್ಯಾಪ್ ಮತ್ತು ಲಾರ್ಜ್ಕ್ಯಾಪ್ ಕಂಪನಿಗಳನ್ನು ಪ್ರತಿನಿಧಿಸುತ್ತದೆ. ‘ನಿಫ್ಟಿ 200 ವ್ಯಾಲ್ಯೂ 30 ಸೂಚ್ಯಂಕ’ವು ಮಾರುಕಟ್ಟೆಯನ್ನು ಪ್ರತಿನಿಧಿಸುತ್ತಲೇ, ಆಯ್ದ 30 ಷೇರುಗಳ ಮೇಲೆ ಗಮನ ಹರಿಸುತ್ತದೆ.

ಎರಡನೆಯದಾಗಿ, ಕಡಿಮೆ ಮೌಲ್ಯಕ್ಕೆ ಲಭ್ಯವಿರುವ ಷೇರುಗಳ ಮೇಲೆ ಹೂಡಿಕೆ ಮಾಡುವ ‘ವ್ಯಾಲ್ಯೂ ಇನ್ವೆಸ್ಟಿಂಗ್’ ವಿಧಾನವು ದೀರ್ಘಾವಧಿಯಲ್ಲಿ ಹೆಚ್ಚಿನ ಗಳಿಕೆ ತಂದುಕೊಟ್ಟಿದೆ. ಮೂರನೆಯದಾಗಿ, ಇಟಿಎಫ್ ಅಥವಾ ಇಂಡೆಕ್ಸ್ ಫಂಡ್ಗಳ ಮೂಲಕ ಹೂಡಿಕೆ ಮಾಡುವುದು ಕಡಿಮೆ ವೆಚ್ಚದ ಕೆಲಸ. ಇದು ಕೂಡ ದೀರ್ಘಾವಧಿಯಲ್ಲಿ ಹೆಚ್ಚಿನ ಗಳಿಕೆ ತಂದುಕೊಡುವುದಕ್ಕೆ ನೆರವಾಗಬಹುದು.

ದೀರ್ಘಾವಧಿಯಲ್ಲಿ ಇದರ ಪಾತ್ರ

ದೀರ್ಘಾವಧಿಗೆ ಹಣ ತೊಡಗಿಸುವ ಉದ್ದೇಶ ಇರುವ ಹೂಡಿಕೆದಾರರಿಗೆ ‘ನಿಫ್ಟಿ 200 ವ್ಯಾಲ್ಯೂ 30 ಸೂಚ್ಯಂಕ’ದಲ್ಲಿ ಹಣ ತೊಡಗಿಸುವುದು ಹೂಡಿಕೆಯಲ್ಲಿ ವೈವಿಧ್ಯ ಸಾಧಿಸಲು ಹೆಚ್ಚುವರಿ ನೆರವು ಒದಗಿಸಬಹುದು. ಬೇರೆ ಬೇರೆ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿ ಕಾಣುವ ಭಿನ್ನ ಬಗೆಯ ಚಲನೆಯ ಸಂದರ್ಭಗಳಲ್ಲಿ ಹೂಡಿಕೆದಾರರಿಗೆ ಇದು ಸಹಾಯಕ್ಕೆ ಬರಬಹುದು.

ಲೇಖಕ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ ಕಂಪನಿಯ ಹೂಡಿಕೆ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.