ಮುಂಬೈ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ನಡೆದ ತೇಜಿ ವಹಿವಾಟಿನ ಪರಿಣಾಮವಾಗಿ ಭಾರತದ ಷೇರುಪೇಟೆಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದವು.

ಪಶ್ಚಿಮ ಏಷ್ಯಾದಲ್ಲಿನ ಸಮರದ ತೀವ್ರತೆಯು ತಗ್ಗಬಹುದು ಎಂಬ ಆಶಾಭಾವನೆಯು ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಗಮನ ನೀಡುವಂತೆ ಮಾಡಿತು ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,205 ಅಂಶ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 394 ಅಂಶ ಜಿಗಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್ಗೆ ಶೇ 5.07ರಷ್ಟು ಕಡಿಮೆ ಆಗಿ 99.19 ಡಾಲರ್ಗೆ ತಲುಪಿದೆ.

‘ಮಂಗಳವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ್ದ ಷೇರುಪೇಟೆ ಸೂಚ್ಯಂಕಗಳು, ಬುಧವಾರವೂ ಏರುಗತಿಯಲ್ಲಿ ವಹಿವಾಟು ನಡೆಸಿದವು. ಜಾಗತಿಕ ಮಟ್ಟದಲ್ಲಿ ರಿಸ್ಕ್ ಕುರಿತಾದ ತಲೆಬಿಸಿ ಕಡಿಮೆ ಆಗಿದೆ, ಯುದ್ಧ ನಿಲ್ಲಬಹುದು ಎಂಬ ಆಸೆ ಮೂಡುತ್ತಿದೆ. ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಯಲ್ಲಿ ಪ್ರಗತಿ ಸಾಧ್ಯವಾಗಬಹುದು ಎಂಬ ಕಾರಣಕ್ಕೆ ಕಚ್ಚಾ ತೈಲದ ಬೆಲೆಯು 100 ಡಾಲರ್ಗಿಂತ ಕಡಿಮೆ ಆಗಿದೆ. ಇದನ್ನು ಷೇರುಪೇಟೆಗಳು ಸ್ವಾಗತಿಸಿವೆ’ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. ಬುಧವಾರ ಷೇರುಪೇಟೆಯ ಎಲ್ಲ ವಲಯಗಳ ಸೂಚ್ಯಂಕಗಳು ಏರಿಕೆ ಕಂಡಿವೆ.

ಏಷ್ಯಾದಲ್ಲಿ ದಕ್ಷಿಣ ಕೊರಿಯಾ, ಜಪಾನ್, ಚೀನಾದ ಶಾಂಘೈ, ಹಾಂಗ್ ಕಾಂಗ್ನ ಷೇರುಪೇಟೆಗಳು ಏರಿಕೆ ದಾಖಲಿಸಿವೆ.

‘ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ತಿಳಿಯಾಗಬಹುದು ಎಂಬ ಸೂಚನೆಗಳು ಸಿಕ್ಕಿರುವುದು ಹೂಡಿಕೆದಾರರಲ್ಲಿ ಭರವಸೆ ಮೂಡಲು ಮುಖ್ಯ ಕಾರಣ’ ಎಂದು ಲಿವ್ಲಾಂಗ್ ವೆಲ್ತ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಹರಿಪ್ರಸಾದ್ ಕೆ. ಹೇಳಿದ್ದಾರೆ.

ಸಂಪತ್ತು ಮೌಲ್ಯ ಏರಿಕೆ, ರೂಪಾಯಿ ಇನ್ನಷ್ಟು ಕುಸಿತ

ನವದೆಹಲಿ/ಮುಂಬೈ (ಪಿಟಿಐ): ಎರಡು ದಿನಗಳಿಂದ ಷೇರುಪೇಟೆಗಳಲ್ಲಿ ತೇಜಿ ವಹಿವಾಟು ನಡೆದ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ₹15.80 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ.

ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 2,577 ಅಂಶ ಜಿಗಿದಿದೆ. ಈಗ ಬಿಎಸ್ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ₹431 ಲಕ್ಷ ಕೋಟಿ ಆಗಿದೆ.

ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 20 ಪೈಸೆಯಷ್ಟು ಕುಸಿದು 93.96ಕ್ಕೆ ತಲುಪಿದೆ. ಇದು ಡಾಲರ್ ಎದುರು ರೂಪಾಯಿಯ ಈವರೆಗಿನ ಕನಿಷ್ಠ ಮಟ್ಟವಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ, ಡಾಲರ್ ದುರ್ಬಲಗೊಂಡಿದ್ದು ಹಾಗೂ ದೇಶದ ಷೇರುಪೇಟೆಗಳಲ್ಲಿ ತೇಜಿ ವಹಿವಾಟು ನಡೆದರೂ ರೂಪಾಯಿ ಮೌಲ್ಯ ಕುಸಿತ ತಡೆಯಲು ಆಗಿಲ್ಲ ಎಂದು ವರ್ತಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.