ಅದಾನಿ ಎಫ್‌ಪಿಒ: ಅಷ್ಟೂ ಷೇರುಗಳಿಗೆ ಬಿಡ್

ನವದೆಹಲಿ: ಅದಾನಿ ಸಮೂಹದ ಪ್ರಮುಖ ಕಂಪನಿಯಾಗಿರುವ ಅದಾನಿ ಎಂಟರ್‌ಪ್ರೈಸಸ್‌ನ ₹ 20 ಸಾವಿರ ಕೋಟಿ ಮೌಲ್ಯದ ಷೇರು ಮಾರಾಟ ಪ್ರಕ್ರಿಯೆಯಲ್ಲಿ (ಎಫ್‌ಪಿಒ) ಮಂಗಳವಾರ ಅಂತ್ಯದ ಹೊತ್ತಿಗೆ ಅಷ್ಟೂ ಷೇರುಗಳಿಗೆ ಬಿಡ್‌ಗಳು ಸಲ್ಲಿಕೆಯಾಗಿವೆ.
ಮಾರಾಟಕ್ಕೆ ಒಟ್ಟು 4.55 ಕೋಟಿ ಷೇರುಗಳು ಇದ್ದವು. 4.62 ಕೋಟಿ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿವೆ. ಸಾಂಸ್ಥಿಕೇತರ ಹೂಡಿಕೆದಾರರು ತಮಗೆ ಮೀಸಲಾಗಿದ್ದ ಷೇರುಗಳ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಷೇರುಗಳಿಗೆ ಬಿಡ್ ಸಲ್ಲಿಸಿದ್ದಾರೆ.
ಅರ್ಹ ಸಾಂಸ್ಥಿಕ ಹೂಡಿಕೆದಾರರ ವಿಭಾಗದಲ್ಲಿ ಸರಿಸುಮಾರು ಅಷ್ಟೂ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿದೆ ಎಂದು ಮುಂಬೈ ಷೇರುಪೇಟೆಯಲ್ಲಿನ ವಿವರಗಳು ಹೇಳಿವೆ.
ಆದರೆ, ಸಣ್ಣ ಹೂಡಿಕೆದಾರರು ಹಾಗೂ ಕಂಪನಿಯ ಉದ್ಯೋಗಿಗಳ ಕಡೆಯಿಂದ ಹೆಚ್ಚಿನ ಬಿಡ್ ಸಲ್ಲಿಕೆಯಾಗಿಲ್ಲ. ಸಣ್ಣ ಹೂಡಿಕೆದಾರರಿಗೆ ಮೀಸಲಾಗಿದ್ದ ಷೇರುಗಳಲ್ಲಿ ಶೇ 11ರಷ್ಟು ಷೇರುಗಳಿಗೆ, ನೌಕರರಿಗೆ ಮೀಸಲಾಗಿದ್ದ ಷೇರುಗಳಲ್ಲಿ ಶೇ 52ರಷ್ಟು ಷೇರುಗಳಿಗೆ ಮಾತ್ರ ಬಿಡ್ ಸಲ್ಲಿಕೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.