ಕರಡಿ ಹಿಡಿತಕ್ಕೆ ಸಿಗದ ಗೂಳಿ

7
7ನೇ ದಿನವೂ ಮುಂದುವರಿದ ದಾಖಲೆಗಳ ಸರಣಿ

ಕರಡಿ ಹಿಡಿತಕ್ಕೆ ಸಿಗದ ಗೂಳಿ

Published:
Updated:

ಮುಂಬೈ: ಷೇರುಪೇಟೆಯಲ್ಲಿ ಮಧ್ಯಾಹ್ನದವರೆಗೂ ಕರಡಿ ಕುಣಿದರೆ, ಆ ಬಳಿಕ ಗೂಳಿ ಓಟಕ್ಕೆ ಮತ್ತೊಂದು ಸಾರ್ವಕಾಲಿಕ ದಾಖಲೆಯ ವಹಿವಾಟು ಸೃಷ್ಟಿಯಾಯಿತು. ಸತತ ಏಳನೇ ದಿನವೂ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಂಗಳವಾರ 118 ಅಂಶ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮಟ್ಟವಾದ 37,606 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಸಹ 37 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 11,356ಕ್ಕೆ ತಲುಪಿತು. 

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌), ಇನ್ಪೊಸಿಸ್‌ ಮತ್ತು ಹೀರೊ ಮೋಟೊಕಾರ್ಪ್‌ ಕಂಪನಿಗಳು ಉತ್ತಮ ಗಳಿಕೆ ಕಂಡುಕೊಂಡಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !