ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯ ಭದ್ರತೆಗೆ ಎಂಡಬ್ಲ್ಯುಪಿ ಕಾಯ್ದೆ

Last Updated 30 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಒಂದು ಟರ್ಮ್ ಲೈಫ್ ಇನ್ಶೂರೆನ್ಸ್ (ಜೀವ ವಿಮೆ) ತೆಗೆದುಕೊಂಡರೆ ಸಾಕು, ನಮ್ಮ ಜೀವಕ್ಕೆ ಏನಾದರು ತೊಂದರೆ ಆದರೂ ಮಡದಿ, ಮಕ್ಕಳ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ಬರೀ ಇನ್ಶೂರೆನ್ಸ್ ತಗೆದುಕೊಂಡ ಮಾತ್ರಕ್ಕೆ ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ಇನ್ಶೂರೆನ್ಸ್ ಹಣ ಸಿಕ್ಕಿಬಿಡುವುದಿಲ್ಲ.

ಎಷ್ಟೋ ಸಂದರ್ಭದಲ್ಲಿ ನಾಮಿನಿ ಹೆಸರಿಸಿದ್ದರೂ ಸಹಿತ ಇನ್ಶೂರೆನ್ಸ್ ಹಣ, ಸಾಲ ಕೊಟ್ಟಿರುವವರು ಅಥವಾ ಸಂಬಂಧಿಕರ ಪಾಲಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭವನ್ನು ತಡೆಯುವ ಮತ್ತು ವಿವಾಹಿತ ಮಹಿಳೆಗೆ ಇನ್ಶೂರೆನ್ಸ್‌ನ ಪೂರ್ಣ ಪ್ರಮಾಣದ ಹಣ ಸಿಗುವಂತೆ ಮಾಡುವ ಕಾಯ್ದೆಯೇ ವಿವಾಹಿತ ಮಹಿಳೆ ಆಸ್ತಿ ಕಾಯ್ದೆ (ಎಂಡಬ್ಲ್ಯುಪಿ ಆಕ್ಟ್) .1874 ರಲ್ಲಿ ಜಾರಿಗೆ ಬಂದಿರುವ ಈ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಇನ್ಶೂರೆನ್ಸ್ ಪಡೆದುಕೊಂಡರೆ, ಮಡದಿ, ಮಕ್ಕಳು ಅಥವಾ ಸೂಚಿತ ಅವಲಂಬಿತರಿಗೆ ಮಾತ್ರ ಇನ್ಶೂರೆನ್ಸ್ ಕ್ಲೇಮ್ ಹಣ ಸಿಗುತ್ತದೆ.

ಯಾವುದೇ ಸಾಲಗಾರರು, ಸಂಬಂಧಿಕರು ಈ ಇನ್ಶೂರೆನ್ಸ್ ಹಣದ ಮೇಲೆ ಹಕ್ಕು ಸಾಧಿಸುವಂತಿಲ್ಲ. ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಇನ್ಶೂರೆನ್ಸ್‌ನಿಂದ ಬಂದಿರುವ ಹಣದಲ್ಲಿ ಸಾಲ ಪಾವತಿ ಮಾಡುವಂತೆಯೂ ಬ್ಯಾಂಕ್‌ಗಳು ಅರ್ಜಿ ಸಲ್ಲಿಸುವ ಹಾಗಿಲ್ಲ. ವಿವಾಹಿತ ಮಹಿಳೆ ಆಸ್ತಿ ಕಾಯ್ದೆಯು ನಂಬಿಕೆಯ ತಳಹದಿಯ ಮೇಲೆ ನಿಂತಿದೆ. ಈ ಕಾಯ್ದೆಯ ಅನ್ವಯ ಇನ್ಶೂರೆನ್ಸ್ ಪಡೆದಿರುವ ವ್ಯಕ್ತಿಯು ಯಾರ ಹೆಸರನ್ನು ಸೂಚಿಸಿರುತ್ತಾರೋ ಅವರಿಗೆ ಮಾತ್ರ ಇನ್ಶೂರೆನ್ಸ್ ಕ್ಲೇಮ್ ಹಣದ ಮೇಲೆ ಹಕ್ಕಿರುತ್ತದೆ. ಯಾವುದೇ ಸಂದರ್ಭದಲ್ಲೂ ಇದನ್ನು ಬದಲಿಸಲು ಸಾಧ್ಯವಿಲ್ಲ.

ಉದಾಹರಣೆ: ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನವೀನ್ ವರ್ಷದ ಹಿಂದೆ ಗೃಹ ಸಾಲ ಪಡೆದಿದ್ದರು. ಗೃಹ ಸಾಲ ಪಡೆದ ಬೆನ್ನಲ್ಲೇ ಅವರು ಟರ್ಮ್ ಲೈಫ್ ಇನ್ಶೂರೆನ್ಸ್ ಪಡೆದುಕೊಂಡು ವಿವಾಹಿತ ಮಹಿಳೆ ಆಸ್ತಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಿ ಮಡದಿ ಮತ್ತು ಮಕ್ಕಳು ಅದರ ಫಲಾನುಭವಿಗಳು ಎಂದು ನಮೂದಿಸಿದರು. ಇದಾದ ಕೆಲ ತಿಂಗಳ ಬಳಿಕ ನವೀನ್ ಅಕಾಲಿಕ ಮರಣ ಹೊಂದಿದರು. ಆಗ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿ ಇನ್ಶೂರೆನ್ಸ್‌ನಿಂದ ಬರುವ ಹಣದಿಂದ ಸಾಲ ಮರುಪಾವತಿ ಮಾಡಬೇಕು ಎಂದು ಅರ್ಜಿ ಸಲ್ಲಿಸಿದರು. ಪಾಲಿಸಿಯನ್ನು ವಿವಾಹಿತ ಮಹಿಳೆ ಆಸ್ತಿ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿರುವುದರಿಂದ ಸಾಲ ಪಾವತಿಗೆ ಇನ್ಶೂರೆನ್ಸ್ ಹಣ ನೀಡುವಂತೆ ಸೂಚಿಸಲು ಸಾಧ್ಯವಿಲ್ಲ. ಪತ್ನಿ ಮತ್ತು ಮಕ್ಕಳಿಗೆ ಮಾತ್ರ ಆ ಹಣ ನೀಡಬಹುದು ಎಂದು ಕೋರ್ಟ್ ಹೇಳಿತು.

ವಿವಾಹಿತ ಮಹಿಳೆ ಆಸ್ತಿ ಕಾಯ್ದೆ ಯಾಕೆ ಮುಖ್ಯ?

l ಸಾಲ ಪಡೆದುಕೊಂಡಿರುವ ಅಥವಾ ಹೆಚ್ಚು ಆರ್ಥಿಕ ಜವಾಬ್ದಾರಿ ಹೊತ್ತಿರುವ ಬಿಸಿನೆನ್ ಮೆನ್, ವೇತನದಾರರ ಕುಟುಂಬಕ್ಕೆ ಇದು ರಕ್ಷಾಕವಚ

l ಅನಿರೀಕ್ಷಿತ ಸಂದರ್ಭದಲ್ಲೂ ಮಕ್ಕಳು ಮತ್ತು ಪತ್ನಿಗೆ ಅಡೆತಡೆಯಿಲ್ಲದ ಇನ್ಶೂರೆನ್ಸ್‌ ಹಣ ಸಿಗುತ್ತದೆ

l ಸಂಬಂಧಿಕರಿಂದ ವಿಮೆ ಹಣದ ಸಂಭವನೀಯ ದುರುಪಯೋಗ ತಪ್ಪಿಸಬಹುದು

l ವಿಮೆ ಹಣ ಮಡದಿ- ಮಕ್ಕಳಿಗಷ್ಟೇ ಸಿಗಬೇಕು ಎಂದು ಬಯಸುವ ಪ್ರತಿಯೊಬ್ಬರಿಗೂ ಉಪಯುಕ್ತ

2019 ರಲ್ಲಿ ಹೇಗಿರಲಿದೆ ಪೇಟೆ ವರ್ತನೆ ?

2019 ನೇ ವರ್ಷದಲ್ಲಿ ಷೇರುಪೇಟೆ ಹೇಗೆ ವರ್ತಿಸಲಿದೆ? ಚುನಾವಣೆ ವರ್ಷದಲ್ಲಿ ಉತ್ತಮ ಲಾಭಾಂಶ ದೊರೆಯುವುದೇ? ಹೀಗೆ ಹತ್ತಾರು ಪ್ರಶ್ನೆಗಳು ಹೂಡಿಕೆದಾರರ ಮನದಲ್ಲಿ ಮನೆ ಮಾಡಿವೆ. ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾರುಕಟ್ಟೆಯ ಈವರೆಗಿನ ಫಲಿತಾಂಶವನ್ನು ಲೆಕ್ಕಾಚಾರ ಮಾಡುವುದು ಮುಖ್ಯ.

2017 ರಲ್ಲಿ ಉತ್ತಮ ಬೆಳವಣಿಗೆ ಕಂಡ ನಿಫ್ಟಿ ಮತ್ತು ಸೆನ್ಸೆಕ್ಸ್ ಶೇ 28 ರಷ್ಟು ಏರಿಕೆ ದಾಖಲಿಸಿದ್ದವು. ಆದರೆ 2018 ರಲ್ಲಿ ಷೇರುಪೇಟೆಯಲ್ಲಿ ಅನಿಶ್ಚಿತತೆಯೇ ಕೇಂದ್ರಬಿಂದುವಾಗಿತ್ತು. ಅಮೆರಿಕ ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟು, ದೀರ್ಘಾವಧಿ ಬಂಡವಾಳ ಹೂಡಿಕೆ ತೆರಿಗೆ ಜಾರಿ (ಎಲ್‌ಟಿಸಿಜಿ) , ಮ್ಯೂಚುವಲ್ ಫಂಡ್‌ಗಳ ಮರು ವಿಂಗಡಣೆ, ಅಮೆರಿಕ ಬ್ಯಾಂಕ್‌ನ ಬಡ್ಡಿ ದರ ಹೆಚ್ಚಳ, ಕಚ್ಚಾ ತೈಲ ದರದಲ್ಲಿ ಗಣನೀಯ ಏರಿಕೆ ಮತ್ತು ಇಳಿಕೆ, ಬ್ರೆಕ್ಸಿಟ್‌ನ ಅನಿಶ್ಚಿತತೆ, ರೂಪಾಯಿ ಕುಸಿತ, ಪಂಚ ರಾಜ್ಯಗಳಲ್ಲಿನ ಚುನಾವಣೆ ಫಲಿತಾಂಶ, ನಗದು ಕೊರತೆ ಹೀಗೆ ಹತ್ತಾರು ಬೆಳವಣಿಗೆಗಳು ಹೂಡಿಕೆದಾರರನ್ನು ಕಂಗೆಡಿಸಿದ್ದವು. ಪರಿಣಾಮ 2018 ರ ವರ್ಷಾಂತ್ಯಕ್ಕೆ ಸೆನ್ಸೆಕ್ಸ್ ಶೇ 5.93 ರಷ್ಟು ಪ್ರಗತಿ ಸಾಧಿಸಿದರೆ, ನಿಫ್ಟಿ (50) ಶೇ 3.13 ರಷ್ಟು ಬೆಳವಣಿಗೆಯನ್ನು ಮಾತ್ರ ಕಂಡಿತು.

2019 ಮಾರ್ಚ್ ವೇಳೆಗೆ ಚುನಾವಣೆ ಕಾವು ಪಡೆದುಕೊಳ್ಳಲಿದೆ. ಚುನಾವಣೆಗೂ ಮುನ್ನ ಘೋಷಣೆ ಮಾಡುವ ಯೋಜನೆಗಳು, ವಿತ್ತೀಯ ನೀತಿ, ಸೇರಿ ಹಲವು ವಿಷಯಗಳು ಮಾರುಕಟ್ಟೆಯ ಏರಿಳಿತಕ್ಕೆ ಕಾರಣವಾಗಲಿವೆ. ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರುವುದೋ? ಇಲ್ಲವೋ? ಎಂಬ ಅಂಶ ಮಾರುಕಟ್ಟೆಯ ಗತಿ ನಿರ್ಧರಿಸಲಿದೆ. ಹೀಗೆಂದ ಮಾತ್ರಕ್ಕೆ 2019 ರಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲೇಬಾರದು ಎಂದಲ್ಲ. ಹೊಸದಾಗಿ ಹೂಡಿಕೆ ಆರಂಭಿಸಬೇಕು ಎನ್ನುವವರಿಗೆ ಇದು ಸಕಾಲ.

ದೀರ್ಘಾವಧಿಗೆ ಷೇರುಗಳಲ್ಲಿ ( ಲಾರ್ಜ್ ಕ್ಯಾಪ್) ಹಣ ತೊಡಗಿಸಿದರೆ ಚುನಾವಣೆಯ ಪ್ರಭಾವ ಅದರ ಮೇಲೆ ಅಷ್ಟಾಗಿ ಆಗುವುದಿಲ್ಲ. ಚುನಾವಣೆಗೆ ಮೊದಲು ಸಾಕಷ್ಟು ಯೋಜನೆಗಳು ಘೋಷಣೆಯಾಗುವುದರಿಂದ ಮೂಲಸೌಕರ್ಯ, ರಸ್ತೆ ನಿರ್ಮಾಣ, ಸಿಮೆಂಟ್, ಸ್ಟೀಲ್ ಕಂಪನಿಗಳಲ್ಲಿ ಹೂಡಿಕೆ ಬಗ್ಗೆ ಯೋಚಿಸಬಹುದು. ಇದಲ್ಲದೆ ಎಫ್‌ಎಂಸಿಜಿ, ಮಾಹಿತಿ ತಂತ್ರಜ್ಞಾನ, ಖಾಸಗಿ ಬ್ಯಾಂಕ್, ವಿಮಾ ವಲಯದ ಕಂಪನಿಗಳಲ್ಲೂ ಹೂಡಿಕೆ ಬಗ್ಗೆ ಯೋಚಿಸಬಹುದು.

ವಾರದ ಮುನ್ನೋಟ:ಮಾರಾಟದ ಒತ್ತಡದಿಂದಾಗಿ ಪೇಟೆಯಲ್ಲಿ ಅನಿಶ್ಚಿತತೆ ಇರಲಿದೆ. ದೇಶಿಯವಾಗಿ ಎಲ್ಲ ಲೆಕ್ಕಾಚಾರಗಳು ಸರಿ ಇದ್ದರು ಸಹ ಜಾಗತಿಕ ವಿದ್ಯಮಾನಗಳು ಮತ್ತು ಭೌಗೋಳಿಕ ಕೇಂದ್ರಿತ ರಾಜಕೀಯ ಸನ್ನಿವೇಶಗಳು ಪೇಟೆಯ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ. ಡಿಸೆಂಬರ್ ನಲ್ಲಿ ಕಾರುಗಳ ಮಾರಾಟದ ಅಂಕಿ –ಅಂಶದ ಜತೆಗೆ ಪ್ರಮುಖ ವಲಯಗಳ ದತ್ತಾಂಶ ಈ ವಾರ ಲಭ್ಯವಾಗಲಿದೆ. ಜನವರಿ 1 ರಂದು ಜಾಗತಿಕ ಮಾರುಕಟ್ಟೆಗಳಿಗೆ ರಜೆ. ಆದರೆ ದೇಶೀಯ ಮಾರುಕಟ್ಟೆ ಕಾರ್ಯನಿರ್ವಹಿಸಲಿದೆ.

2019 ರಲ್ಲಿ ಹೇಗಿರಲಿದೆ ಪೇಟೆ ವರ್ತನೆ ?

2019 ನೇ ವರ್ಷದಲ್ಲಿ ಷೇರುಪೇಟೆ ಹೇಗೆ ವರ್ತಿಸಲಿದೆ? ಚುನಾವಣೆ ವರ್ಷದಲ್ಲಿ ಉತ್ತಮ ಲಾಭಾಂಶ ದೊರೆಯುವುದೇ? ಹೀಗೆ ಹತ್ತಾರು ಪ್ರಶ್ನೆಗಳು ಹೂಡಿಕೆದಾರರ ಮನದಲ್ಲಿ ಮನೆ ಮಾಡಿವೆ. ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾರುಕಟ್ಟೆಯ ಈ ವರೆಗಿನ ಫಲಿತಾಂಶವನ್ನು ಲೆಕ್ಕಾಚಾರ ಮಾಡುವುದು ಮುಖ್ಯ.

2017 ರಲ್ಲಿ ಉತ್ತಮ ಬೆಳವಣಿಗೆ ಕಂಡ ನಿಫ್ಟಿ ಮತ್ತು ಸೆನ್ಸೆಕ್ಸ್ ಶೇ 28 ರಷ್ಟು ಏರಿಕೆ ದಾಖಲಿಸಿದ್ದವು. ಆದರೆ 2018 ರಲ್ಲಿ ಷೇರುಪೇಟೆಯಲ್ಲಿ ಅನಿಶ್ಚಿತತೆಯೇ ಕೇಂದ್ರಬಿಂದುವಾಗಿತ್ತು. ಅಮೆರಿಕ ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟು, ದೀರ್ಘಾವಧಿ ಬಂಡವಾಳ ಹೂಡಿಕೆ ತೆರಿಗೆ ಜಾರಿ (ಎಲ್‌ಟಿಸಿಜಿ) , ಮ್ಯೂಚುವಲ್ ಫಂಡ್‌ಗಳ ಮರು ವಿಂಗಡಣೆ, ಅಮೆರಿಕ ಬ್ಯಾಂಕ್‌ನ ಬಡ್ಡಿ ದರ ಹೆಚ್ಚಳ, ಕಚ್ಚಾ ತೈಲ ದರದಲ್ಲಿ ಗಣನೀಯ ಏರಿಕೆ ಮತ್ತು ಇಳಿಕೆ, ಬ್ರೆಕ್ಸಿಟ್‌ನ ಅನಿಶ್ಚಿತತೆ, ರೂಪಾಯಿ ಕುಸಿತ, ಪಂಚ ರಾಜ್ಯಗಳಲ್ಲಿನ ಚುನಾವಣೆ ಫಲಿತಾಂಶ, ನಗದು ಕೊರತೆ ಹೀಗೆ ಹತ್ತಾರು ಬೆಳವಣಿಗೆಗಳು ಹೂಡಿಕೆದಾರರನ್ನು ಕಂಗೆಡಿಸಿದ್ದವು. ಪರಿಣಾಮ 2018 ರ ವರ್ಷಾಂತ್ಯಕ್ಕೆ ಸೆನ್ಸೆಕ್ಸ್ ಶೇ 5.93 ರಷ್ಟು ಪ್ರಗತಿ ಸಾಧಿಸಿದರೆ, ನಿಫ್ಟಿ ( 50 ) ಶೇ 3.13 ರಷ್ಟು ಬೆಳವಣಿಗೆಯನ್ನು ಮಾತ್ರ ಕಂಡಿತು.

2019 ಮಾರ್ಚ್ ವೇಳೆಗೆ ಚುನಾವಣೆ ಕಾವು ಪಡೆದುಕೊಳ್ಳಲಿದೆ. ಚುನಾವಣೆಗೂ ಮುನ್ನ ಘೋಷಣೆ ಮಾಡುವ ಯೋಜನೆಗಳು, ವಿತ್ತೀಯ ನೀತಿ, ಸೇರಿ ಹಲವು ವಿಷಯಗಳು ಮಾರುಕಟ್ಟೆಯ ಏರಿಳಿತಕ್ಕೆ ಕಾರಣವಾಗಲಿವೆ. ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರುವುದೋ? ಇಲ್ಲವೋ? ಎಂಬ ಅಂಶ ಮಾರುಕಟ್ಟೆಯ ಗತಿ ನಿರ್ಧರಿಸಲಿದೆ. ಹೀಗೆಂದ ಮಾತ್ರಕ್ಕೆ 2019 ರಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲೇಬಾರದು ಎಂದಲ್ಲ. ಹೊಸದಾಗಿ ಹೂಡಿಕೆ ಆರಂಭಿಸಬೇಕು ಎನ್ನುವವರಿಗೆ ಇದು ಸಕಾಲ. ದೀರ್ಘಾವಧಿಗೆ ಷೇರುಗಳಲ್ಲಿ ( ಲಾರ್ಜ್ ಕ್ಯಾಪ್) ಹಣ ತೊಡಗಿಸಿದರೆ ಚುನಾವಣೆಯ ಪ್ರಭಾವ ಅದರ ಮೇಲೆ ಅಷ್ಟಾಗಿ ಆಗುವುದಿಲ್ಲ. ಚುನಾವಣೆಗೆ ಮೊದಲು ಸಾಕಷ್ಟು ಯೋಜನೆಗಳು ಘೋಷಣೆಯಾಗುವುದರಿಂದ ಮೂಲಸೌಕರ್ಯ , ರಸ್ತೆ ನಿರ್ಮಾಣ, ಸಿಮೆಂಟ್, ಸ್ಟೀಲ್ ಕಂಪನಿಗಳಲ್ಲಿ ಹೂಡಿಕೆ ಬಗ್ಗೆ ಯೋಚಿಸಬಹುದು. ಇದಲ್ಲದೆ ಎಫ್‌ಎಂಸಿಜಿ, ಮಾಹಿತಿ ತಂತ್ರಜ್ಞಾನ, ಖಾಸಗಿ ಬ್ಯಾಂಕ್, ವಿಮಾ ವಲಯದ ಕಂಪನಿಗಳಲ್ಲೂ ಹೂಡಿಕೆ ಬಗ್ಗೆ ಯೋಚಿಸಬಹುದು.

ವಾರದ ಮುನ್ನೋಟ:ಮಾರಾಟದ ಒತ್ತಡದಿಂದಾಗಿ ಪೇಟೆಯಲ್ಲಿ ಅನಿಶ್ಚಿತತೆ ಇರಲಿದೆ. ದೇಶಿಯವಾಗಿ ಎಲ್ಲ ಲೆಕ್ಕಾಚಾರಗಳು ಸರಿ ಇದ್ದರು ಸಹ ಜಾಗತಿಕ ವಿದ್ಯಮಾನಗಳು ಮತ್ತು ಭೌಗೋಳಿಕ ಕೇಂದ್ರಿತ ರಾಜಕೀಯ ಸನ್ನಿವೇಶಗಳು ಪೇಟೆಯ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ. ಡಿಸೆಂಬರ್ ನಲ್ಲಿ ಕಾರುಗಳ ಮಾರಾಟದ ಅಂಕಿ –ಅಂಶದ ಜತೆಗೆ ಪ್ರಮುಖ ವಲಯಗಳ ದತ್ತಾಂಶ ಈ ವಾರ ಲಭ್ಯವಾಗಲಿದೆ. ಜನವರಿ 1 ರಂದು ಜಾಗತಿಕ ಮಾರುಕಟ್ಟೆಗಳಿಗೆ ರಜೆ. ಆದರೆ ದೇಶೀಯ ಮಾರುಕಟ್ಟೆ ಕಾರ್ಯನಿರ್ವಹಿಸಲಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT