ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣಕ್ಕೆ ಸರ್ಕಾರದ ಸಮ್ಮತಿ; ಕುಸಿದ ಬಿಪಿಸಿಎಲ್‌, ಎಸ್‌ಸಿಐ ಷೇರುಗಳು

Last Updated 21 ನವೆಂಬರ್ 2019, 9:56 IST
ಅಕ್ಷರ ಗಾತ್ರ

ನವದೆಹಲಿ:ಸಾರ್ವಜನಿಕ ವಲಯದ ಐದು ಕಂಪನಿಗಳ ಷೇರು ಮಾರಾಟ ಮಾಡಲು ಕೇಂದ್ರ ಸರ್ಕಾರ ಬುಧವಾರ ನಿರ್ಧರಿಸಿದ ಬೆನ್ನಲೇ ಬಿಪಿಸಿಎಲ್,ಎಸ್‌ಸಿಐ, ಕನ್‌ಕಾರ್‌ ಷೇರುಗಳ ಬೆಲೆ ಕುಸಿತ ಕಂಡಿವೆ.

ಗುರುವಾರ ಆರಂಭದಲ್ಲಿಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್) ಷೇರು 52 ವಾರಗಳ ಗರಿಷ್ಠ ₹549.70ರಿಂದ ವಹಿವಾಟು ನಡೆದರೆ,ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಸಿಐ) ಶೇ 2.12 ಏರಿಕೆಯೊಂದಿಗೆ ₹69.80 ಹಾಗೂಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ(ಕಾನ್‌ಕಾರ್‌) ಷೇರುಗಳು ಶೇ 4.67ರಷ್ಟು ಹೆಚ್ಚಳದೊಂದಿದೆ ₹605 ಮುಟ್ಟಿತು.

ಆದರೆ, ವಹಿವಾಟಿನ ಅರ್ಧ ಗಂಟೆಗೂ ಮುನ್ನವೇ ಷೇರುಗಳ ಬೆಲೆ ಹಿಂದಿನ ದಿನ ಮುಕ್ತಾಯಕ್ಕಿಂತಲೂ ಕಡಿಮೆಯಾಗಿದೆ.ಪ್ರಸ್ತುತ ಬಿಪಿಸಿಎಲ್‌ ಷೇರು ₹523.80,ಎಸ್‌ಸಿಐ ಷೇರು ₹66.20 ಹಾಗೂ ಕಾನ್‌ಕಾರ್‌ ಪ್ರತಿ ಷೇರು ಬೆಲೆ ₹580.10ಕ್ಕೆ ಇಳಿಕೆಯಾಗಿದೆ.

ಬಿಪಿಸಿಎಲ್‌ನಲ್ಲಿ ಹೊಂದಿರುವ ಒಟ್ಟಾರೆ ಷೇರಿನಲ್ಲಿ ಶೇ 53.29ರಷ್ಟನ್ನು ಮಾರಾಟ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಟಿಎಚ್‌ಡಿಸಿ ಇಂಡಿಯಾ ಮತ್ತು ನಾರ್ತ್‌ ಈಸ್ಟ್ ಎಲೆಕ್ಟ್ರಿಕ್ ಕಾರ್ಪೊರೇಷನ್‌ನ ಪಾಲನ್ನು ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿಗೆ ನೀಡಲಿದೆ. ಸರ್ಕಾರದ ನಿಯಂತ್ರಣ ಉಳಿಸಿಕೊಂಡು ಆಯ್ದ ಕಂಪನಿಗಳ ಷೇರು ಪಾಲನ್ನು ಶೇ 51ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಎಸ್‌ಸಿಐನಲ್ಲಿ ಸರ್ಕಾರ ಹೊಂದಿರುವ ಶೇ 63.75ರಷ್ಟು ಪಾಲುದಾರಿಕೆಯ ಪೂರ್ಣ ಷೇರುಗಳನ್ನು ಹಾಗೂ ಕಾನ್‌ಕಾರ್‌ನ ಶೇ 30.8 ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಕಾನ್‌ಕಾರ್‌ನಲ್ಲಿ ಸರ್ಕಾರ ಒಟ್ಟು ಶೇ 54.80ರಷ್ಟು ಷೇರುಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT