ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಐ ಹೂಡಿಕೆ ₹6,992 ಕೋಟಿ

ನಿರೀಕ್ಷಿತ ಮಟ್ಟದಲ್ಲಿ ಕಾರ್ಪೊರೇಟ್‌ ಫಲಿತಾಂಶ l ರೂಪಾಯಿ ಚೇತರಿಕೆ
Last Updated 6 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ದೇಶದ ಷೇರುಪೇಟೆಗಳಲ್ಲಿ ಮತ್ತೆ ಹೂಡಿಕೆ ಚಟುವಟಿಕೆ ಆರಂಭಿಸಿದ್ದಾರೆ. ಶುಕ್ರವಾರ ಕೊನೆಗೊಂಡ ವಾರದ ವಹಿವಾಟಿನ ಐದು ದಿನಗಳಲ್ಲಿಯೂ ಷೇರುಗಳನ್ನು ಖರೀದಿಸಲು ಗಮನ ಹರಿಸಿದ್ದಾರೆ.

ಆಗಸ್ಟ್‌ 1 ರಿಂದ 5ರವರೆಗೆ ನಡೆದ ವಹಿವಾಟಿನಲ್ಲಿ ₹6,992 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ವಿದೇಶಿ ಬಂಡವಾಳ ಒಳಹರಿವಿಗೆ ಹಲವು ಅಂಶಗಳು ಕಾರಣವಾಗಿವೆ. ಜಾಗತಿಕವಾಗಿ, ಅಮೆರಿಕದ ಫೆಡರಲ್‌ ರಿಸರ್ವ್‌ ಸೇರಿದಂತೆ ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ವೇಗವಾಗಿ ಬಡ್ಡಿದರ ಹೆಚ್ಚಳ ಮಾಡದೇ ಇರಲು ಮುಂದಾಗಿವೆ. ಅಲ್ಲದೆ, ಅಮೆರಿಕದಲ್ಲಿ ಸದ್ಯ ಆರ್ಥಿಕ ಹಿಂಜರಿತದ ಸ್ಥಿತಿ ಇಲ್ಲ ಎಂದು ಫೆಡರಲ್‌ ರಿಸರ್ವ್ ಅಧ್ಯಕ್ಷ ಜೊರೋಮ್‌ ಪೋವೆಲ್‌ ಹೇಳಿಕೆ ನೀಡಿರುವುದು ಸಹ ವಿದೇಶಿ ಹೂಡಿಕೆದಾರರಲ್ಲಿ ಸಕಾರಾತ್ಮಕ ಭಾವನೆ ಮೂಡಲು ಕಾರಣವಾಗಿವೆ.

ದೇಶದಲ್ಲಿ, ಕಾರ್ಪೊರೇಟ್‌ ವಲಯದ ಮೊದಲ ತ್ರೈಮಾಸಿ ಫಲಿತಾಂಶವು ಬಹುತೇಕವಾಗಿ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಇದೆ. ಇನ್ನು ಅಮೆರಿಕದ ಡಾಲರ್ ಎದುರು ₹80ಕ್ಕಿಂತ ಹೆಚ್ಚಿನ ಕುಸಿತ ಕಂಡಿದ್ದ ರೂಪಾಯಿ ಮತ್ತೆ ಚೇತರಿಕೆ ಹಾದಿಗೆ ಮರಳಿದೆ. ಈ ಬೆಳವಣಿಗೆಗಳು ಸಹ ವಿದೇಶಿ ಹೂಡಿಕೆಗೆ ಉತ್ತೇಜನ ನೀಡುತ್ತಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.



ಷೇರುಪೇಟೆ ಸಂಪತ್ತು ವೃದ್ಧಿ

ಮುಂಬೈ ಷೇರುಪೇಟೆಯಲ್ಲಿ ನಡೆಯುತ್ತಿರುವ ಸಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ವಾರದ ವಹಿವಾಟಿನಲ್ಲಿ ₹ 4.72 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹271.30 ಲಕ್ಷ ಕೋಟಿಗೆ ಏರಿಕೆಯಾಗಿದೆ.

ವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 818 ಅಂಶ ಮತ್ತು ಎನ್‌ಎಸ್‌ಇ ನಿಫ್ಟಿ 239 ಅಂಶ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT