5
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ

ಚಿನ್ನದ ಇಟಿಎಫ್‌ ₹ 150 ಕೋಟಿ ಹೊರಹರಿವು

Published:
Updated:

ನವದೆಹಲಿ (ಪಿಟಿಐ): ಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್‌) ಬಂಡವಾಳ ಹೊರಹರಿವು ಹೆಚ್ಚುತ್ತಲೇ ಇದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌ ಅವಧಿ) ₹ 150 ಕೋಟಿ ಬಂಡವಾಳ ಹೊರಹೋಗಿದೆ. ಇದರಿಂದ ಉದ್ಯಮದ ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯ ಶೇ 12 ರಷ್ಟು ಇಳಿಕೆಯಾಗಿದ್ದು, ₹ 4,567 ಕೋಟಿಗೆ ತಲುಪಿದೆ. 2017–18ರ ಮೊದಲ ತ್ರೈಮಾಸಿಕದಲ್ಲಿ ಸಂಪತ್ತು ಮೌಲ್ಯ ₹ 5,174 ಕೋಟಿ ಇತ್ತು.

ಇದೇ ಅವಧಿಯಲ್ಲಿ ಷೇರುಗಳ ಖರೀದಿಗೆ ₹ 33 ಸಾವಿರ ಕೋಟಿ ಹೂಡಿಕೆಯಾಗಿದೆ.

‘2014 ರಿಂದ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಹೀಗಾಗಿ ಹೂಡಿಕೆದಾರರು ಷೇರುಗಳಲ್ಲಿ ಬಂಡವಾಳ ತೊಡಗಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಕೌಸ್ತುಭಾ ಬೇಲಾಪುರ್‌ಕರ್‌ ಹೇಳಿದ್ದಾರೆ.

2016ರ ಅಕ್ಟೋಬರ್‌ನಲ್ಲಿ ₹ 20 ಕೋಟಿ ಹೂಡಿಕೆ ಆಗಿತ್ತು. 

ಅಂಕಿ–ಅಂಶ

ಬಂಡವಾಳ ಹೊರಹರಿವು (ಕೋಟಿಗಳಲ್ಲಿ)

2017–18;₹835

2016–17;₹ 775

2015–16;₹ 903

2014–15;₹ 1,475 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !