ಗುರುವಾರ , ಏಪ್ರಿಲ್ 9, 2020
19 °C
ಶೇ 52.98ರಷ್ಟು ಷೇರುಗಳನ್ನು ಮಾರಾಟ: ಮೇ 2ಕ್ಕೆ ಬಿಡ್‌ ಅಂತ್ಯ

ಬಿಪಿಸಿಎಲ್‌: ಶೇ 52.98 ಷೇರು ಮಾರಾಟಕ್ಕೆ ಬಿಡ್‌ ಆಹ್ವಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಅನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಕಂಪನಿಯಲ್ಲಿ ಹೊಂದಿರುವ ಶೇ 52.98ರಷ್ಟು ಷೇರುಗಳನ್ನು ಮಾರಾಟ ಮಾಡಲು ಶನಿವಾರ ಬಿಡ್‌ ಆಹ್ವಾನಿಸಿದೆ.

ಷೇರು ಖರೀದಿ ಆಸಕ್ತಿ ತಿಳಿಸಲು ಮೇ 2ರ ಗಡುವು ನೀಡಲಾಗಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಂ) ನೀಡಿರುವ ಬಿಡ್‌ನ ದಾಖಲೆಪತ್ರದಲ್ಲಿ ಈ ವಿವರ ಇದೆ.

ಬಿಪಿಸಿಎಲ್‌ನಲ್ಲಿ ಒಟ್ಟಾರೆ 114.63 ಕೋಟಿ ಷೇರುಗಳಿದ್ದು, ಇದರಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲಿನ ಶೇ 52.98ರಷ್ಟು ಷೇರುಪಾಲನ್ನು ಕಂಪನಿಯ ಆಡಳಿತ ನಿಯಂತ್ರಣದ ಜತೆಗೆ ಮಾರಾಟಕ್ಕೆ ನಿರ್ಧರಿಸಿದೆ.

ನಮಲೀಘರ್‌ ರಿಫೈನರಿ ಲಿ.ನಲ್ಲಿ (ಎನ್‌ಆರ್‌ಎಲ್‌) ಬಿಪಿಸಿಎಲ್‌ ಹೊಂದಿರುವ ಶೇ 61.65ರಷ್ಟು ಷೇರು
ಗಳನ್ನು ಹೊರತುಪಡಿಸಲಾಗಿದೆ. ಇದನ್ನು ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಕಂಪನಿಗೆ ಮಾರಾಟ ಮಾಡಲಾಗುವುದು.

ಎರಡು ಹಂತದಲ್ಲಿ ಬಿಡ್‌ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಖರೀದಿ ಆಸಕ್ತಿ ಅರ್ಜಿ ಸಲ್ಲಿಸುವವರಲ್ಲಿ ಅರ್ಹರಿಗೆ ಎರಡನೇ ಹಂತದಲ್ಲಿ ಬಿಡ್‌ ಮೊತ್ತ ಸಲ್ಲಿಸಲು ಅವಕಾಶ ಸಿಗಲಿದೆ.

ಖಾಸಗೀಕರಣ ಪ್ರಕ್ರಿಯೆಯಲ್ಲಿ ಕೇಂದ್ರೋದ್ಯಮಗಳು ಭಾಗವಹಿಸುವಂತಿಲ್ಲ. ₹ 71 ಸಾವಿರ ಕೋಟಿ ಮೌಲ್ಯ ಹೊಂದಿರುವ ಹಾಗೂ ನಾಲ್ಕಕ್ಕಿಂತ ಅಧಿಕ ಕಂಪನಿಗಳನ್ನು ಒಳಗೊಂಡಿರದ ಒಕ್ಕೂಟವು ಬಿಡ್‌ ಸಲ್ಲಿಸಲು ಅರ್ಹವಾಗಿರಲಿದೆ. ಒಕ್ಕೂಟದ ಮುಂದಾಳು ಕಂಪನಿಯು ಶೇ 40ರಷ್ಟು ಷೇರುಪಾಲು ಹೊಂದಿರಬೇಕು. ಇತರ ಕಂಪನಿಗಳ ಕನಿಷ್ಠ ಮೌಲ್ಯ ₹ 7,100 ಕೋಟಿ ಇರಬೇಕು. ಷೇರು ವಿಕ್ರಯ ಪ್ರಕ್ರಿಯೆಯ ಸಲಹೆ ನೀಡಲು ದೆಲಾಯ್ಟ್‌ ಕಂಪನಿಯನ್ನು ಸರ್ಕಾರ ನೇಮಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು