ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೋದ್ಯಮಗಳ ಷೇರು ಮಾರಾಟ, ಮರುಖರೀದಿ: ₹32,835 ಕೋಟಿ ಸಂಗ್ರಹ

Last Updated 31 ಮಾರ್ಚ್ 2021, 14:11 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೋದ್ಯಮಗಳ ಷೇರು ಮಾರಾಟ ಮತ್ತು ಮರು ಖರೀದಿ ಪ್ರಕ್ರಿಯೆಯ ಮೂಲಕ ಸರ್ಕಾರವು ₹32,835 ಕೋಟಿ ಬಂಡವಾಳ ಸಂಗ್ರಹಿಸಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಪರಿಷ್ಕೃತ ಅಂದಾಜಿನ ಗುರಿ ಮೀರಿದಂತಾಗಿದೆ. ಆದರೆ, ಸಂಗ್ರಹ ಆಗಿರುವ ಮೊತ್ತವು ಬಜೆಟ್‌ ಅಂದಾಜಿಗಿಂತಲೂ ಕಡಿಮೆ ಇದೆ.

ಬಜೆಟ್‌ ಅಂದಾಜಿನ ಪ್ರಕಾರ ₹ 2.10 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಷೇರು ವಿಕ್ರಯಕ್ಕೆ ಹಿನ್ನಡೆ ಆಗಿದ್ದರಿಂದ ಗುರಿಯನ್ನು ₹ 32 ಸಾವಿರ ಕೋಟಿಗೆ ತಗ್ಗಿಸಲಾಯಿತು.

2021–22ನೇ ಹಣಕಾಸು ವರ್ಷಕ್ಕೆ ಷೇರುವಿಕ್ರಯದ ಮೂಲಕ ₹ 1.75 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಏಪ್ರಿಲ್‌ 1ರಿಂದ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಎಲ್‌ಐಸಿ ಐಪಿಒ, ಐಡಿಬಿಐ ಬ್ಯಾಂಕ್‌ ಖಾಸಗೀಕರಣ ಪ್ರಕ್ರಿಯೆಯೂ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT