ಡಿಸೆಂಬರ್‌ 5ರ ನಂತರವೂ ಷೇರುಗಳನ್ನು ಇಟ್ಟುಕೊಳ್ಳಬಹುದು: ಸೆಬಿ

7

ಡಿಸೆಂಬರ್‌ 5ರ ನಂತರವೂ ಷೇರುಗಳನ್ನು ಇಟ್ಟುಕೊಳ್ಳಬಹುದು: ಸೆಬಿ

Published:
Updated:
Deccan Herald

ನವದೆಹಲಿ : ಹೂಡಿಕೆದಾರರು ಈ ವರ್ಷದ ಡಿಸೆಂಬರ್‌ 5ರ ನಂತರವೂ ಷೇರುಗಳನ್ನು ಭೌತಿಕ ಸ್ವರೂಪದಲ್ಲಿ  ತಮ್ಮ ಬಳಿ ಇಟ್ಟುಕೊಳ್ಳಬಹುದು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತಿಳಿಸಿದೆ.

ಷೇರು‍ಪೇಟೆಯಲ್ಲಿ ವಹಿವಾಟು ನಡೆಸುವ ಸಂಸ್ಥೆಗಳ ಷೇರುಗಳು ಡಿಮ್ಯಾಟ್‌ ಖಾತೆಯಲ್ಲಿ ಇದ್ದರೆ ಮಾತ್ರ ಅವುಗಳನ್ನು ಇನ್ನೊಬ್ಬರಿಗೆ ವರ್ಗಾಯಿಸಬಹುದು ಎಂದು ‘ಸೆಬಿ’ ಇದಕ್ಕೂ ಮೊದಲು ನಿರ್ದೇಶನ ನೀಡಿತ್ತು. ಇದಕ್ಕೆ ಡಿಸೆಂಬರ್‌ 5ರ ಗಡುವನ್ನೂ ನಿಗದಿಗೊಳಿಸಿತ್ತು.

ಹೊಸ ತಿದ್ದುಪಡಿಯು, ಹೂಡಿಕೆದಾರರು ಷೇರುಗಳನ್ನು ಭೌತಿಕ ಸ್ವರೂಪದಲ್ಲಿ ತಮ್ಮ ಬಳಿ ಇಟ್ಟುಕೊಳ್ಳುವುದನ್ನು ನಿಷೇಧಿಸುವುದಿಲ್ಲ. 2018ರ ಡಿಸೆಂಬರ್‌ 5ರ ನಂತರವೂ ಭೌತಿಕ ರೂಪದಲ್ಲಿ ಷೇರುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು ಎಂದು ‘ಸೆಬಿ’ ಹೇಳಿಕೆಯಲ್ಲಿ ತಿಳಿಸಿದೆ.

ಉತ್ತರಾಧಿಕಾರ ರೂಪದಲ್ಲಿ ಷೇರುಗಳ ಮಾಲೀಕತ್ವ ಬದಲಾವಣೆಗೆ ಹೊಸ ನಿಯಮ ಅನ್ವಯವಾಗುವುದಿಲ್ಲ. ತಮ್ಮ ಹೆಸರಿನಲ್ಲಿನ ಭೌತಿಕ ಷೇರುಗಳನ್ನು ಡಿಸೆಂಬರ್‌ 5ರ ನಂತರ ಇನ್ನೊಬ್ಬರಿಗೆ ವರ್ಗಾಯಿಸಲು ಇಷ್ಟಪಟ್ಟಿದ್ದರೆ, ಆ ಷೇರುಗಳನ್ನು ಡಿಮ್ಯಾಟ್‌ಗೆ ವರ್ಗಾಯಿಸಬೇಕು ಎಂದು ‘ಸೆಬಿ’ ಸೂಚಿಸಿದೆ.

ಷೇರುಗಳು ಡಿಮ್ಯಾಟ್‌ ಸ್ವರೂಪದಲ್ಲಿ ಇದ್ದರೆ, ಕಂಪನಿಗಳ ಪಾಲುದಾರಿಕೆಗೆ ಸಂಬಂಧಿಸಿದ ದಾಖಲೆಗಳು ಪಾರದರ್ಶಕವಾಗಿರಲಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !