₹1.96 ಲಕ್ಷ ಕೋಟಿ ಸಂಪತ್ತು ನಷ್ಟ

7
ಮೂರು ವಾರಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

₹1.96 ಲಕ್ಷ ಕೋಟಿ ಸಂಪತ್ತು ನಷ್ಟ

Published:
Updated:

ಮುಂಬೈ: ಮುಂಬೈ ಷೇರುಪೇಟೆಯ ವಹಿವಾಟು ಕುಸಿತದಿಂದಾಗಿ ಸೋಮವಾರ ಹೂಡಿಕೆದಾರರಿಗೆ ₹ 1.96 ಲಕ್ಷ ಕೋಟಿ ನಷ್ಟವಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 155 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಜಾಗತಿಕ ವಾಣಿಜ್ಯ ಸಮರ, ರೂಪಾಯಿಯ ದಾಖಲೆ ಕುಸಿತವು ಷೇರುಪೇಟೆಗಳಲ್ಲಿ ಸೋಮವಾರ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿವೆ. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 467 ಅಂಶ ಕುಸಿತ ಕಂಡು ಮೂರು ವಾರಗಳ ಕನಿಷ್ಠ ಮಟ್ಟವಾದ 37,922 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಇದಕ್ಕೂ ಮೊದಲು ಮಾರ್ಚ್‌ 16 ರಂದು ಸೂಚ್ಯಂಕ 509 ಅಂಶಗಳಷ್ಟು ಕುಸಿತ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 151 ಅಂಶ ಇಳಿಕೆಯಾಗಿ 11,438 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಆಗಸ್ಟ್‌ 16 ರಂದು 11,427 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

‘ರೂಪಾಯಿ ಕುಸಿತವು ಷೇರುಗಳನ್ನೂ ಒಳಗೊಂಡು ಎಲ್ಲಾ ರೀತಿಯ ಸಂಪತ್ತು ವರ್ಗಗಳ ಮೇಲೆಯೂ ಪರಿಣಾಮ ಬೀರಲಾರಂಭಿಸಿದೆ. ಇದು ಷೇರುಪೇಟೆಗೆ ದೊಡ್ಡ ಸವಾಲಾಗಿದೆ’ ಎಂದು ಸೆಂಟ್ರಂ ಬ್ರೋಕಿಂಗ್‌ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಜಗನ್ನಾಥಮ್ ಟಿ. ಅವರು ಹೇಳಿದ್ದಾರೆ.

‘ಕಚ್ಚಾ ತೈಲ ದರ ಏರಿಕೆ, ಚಾಲ್ತಿ ಖಾತೆ ಕೊರತೆ ಅಂತರದಲ್ಲಿನ ಹೆಚ್ಚಳ, ರೂಪಾಯಿ ಕುಸಿತವು ಷೇರುಪೇಟೆಯ ಮೇಲೆ ನೇರ ಪ್ರಭಾವ ಬೀರಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ವಿಶ್ಲೇಷಣೆ ಮಾಡಿದ್ದಾರೆ.

ಚೀನಾದ ಎಲ್ಲಾ ಸರಕುಗಳ ಮೇಲೆಯೂ ಗರಿಷ್ಠ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆ ನೀಡಿರುವುದು ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಬೀರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !