ಷೇರುಪೇಟೆಯಲ್ಲಿ ಹೊಸ ಮೈಲಿಗಲ್ಲು: ಸೂಚ್ಯಂಕದಲ್ಲಿ ಏರಿಕೆ

7

ಷೇರುಪೇಟೆಯಲ್ಲಿ ಹೊಸ ಮೈಲಿಗಲ್ಲು: ಸೂಚ್ಯಂಕದಲ್ಲಿ ಏರಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಆರನೇ ದಿನವೂ ಗೂಳಿ ಓಟ ಮುಂದುವರಿದಿದ್ದು, ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆದಿದ್ದು ಶುಕ್ರವಾರದ ಅಂತ್ಯಕ್ಕೆ 37,328 ಅಂಶಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.   

ಎಫ್‌ಎಂಸಿಜಿಐ, ಎಂಜಿನಿಯರಿಂಗ್‌, ಲೋಹ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ಉತ್ತಮ ಖರೀದಿ ವಹಿವಾಟು ನಡೆಯುತ್ತಿರುವುದರಿಂದ ಸೂಚ್ಯಂಕದಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಶುಕ್ರವಾರ 352 ಅಂಶ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 37,328 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ಗುರುವಾರ 36,984 ಅಂಶಗಳಲ್ಲಿ ಅಂತ್ಯಕಂಡಿತ್ತು. ಬೆಳಗ್ಗೆಯಿಂದ ಷೇರು ಖರೀದಿದಾರು ಉತ್ಸಾಹ ತೋರಿದ್ದರಿಂದ 37 ಸಾವಿರ ಗಡಿ ದಾಟುವಲ್ಲಿ ಸಾಧ್ಯವಾಯಿತು ಎಂದು ವಿಶ್ಲೇಷಕರು ಹೇಳಿದ್ದಾರೆ. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್‌ಇ) ನಿಫ್ಟಿ 50 ಅಂಶ ಹೆಚ್ಚಾಗಿ, ದಾಖಲೆ ಮಟ್ಟವಾದ 11,250 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಕಳೆದ ಜನವರಿ 29 ರಂದು ಸೂಚ್ಯಂಕ 11,130 ಅಂಶಗಳ ಗರಿಷ್ಠ ಮಟ್ಟದಲ್ಲಿತ್ತು.

ಬಿಎಸ್‌ಇ ಮತ್ತು ನಿಫ್ಟಿ ಇಂದು ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿ ಮಾಡಿವೆ. ವಿಶ್ಲೇಷಕರು ಶುಕ್ರವಾರವೇ 38 ಸಾವಿರ ಅಂಶಗಳನ್ನು ತಲುಪಬಹುದು ಎಂಬ ನಿರೀಕ್ಷೆ ಹೊಂದಿದ್ದರು. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !