ವಾರದ ವಹಿವಾಟಿನಲ್ಲಿ ಉತ್ತಮ ಗಳಿಕೆ
ಮುಂಬೈ: ಚಂಚಲ ವಹಿವಾಟಿನ ಹೊರತಾಗಿಯೂ ದೇಶದ ಷೇರುಪೇಟೆಗಳು ಉತ್ತಮ ಗಳಿಕೆಯೊಂದಿಗೆ ವಾರದ ವಹಿವಾಟು ಅಂತ್ಯಗೊಳಿಸಿವೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 884 ಅಂಶ ಜಿಗಿತ ಕಂಡು 36,542 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ. ಗುರುವಾರದ ವಹಿವಾಟಿನಲ್ಲಿ 36,740 ಅಂಶಗಳ ಹೊಸ ಎತ್ತರಕ್ಕೆ ಏರಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 246 ಅಂಶ ಏರಿಕೆಯಾಗಿ 11,019 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.
ರೂಪಾಯಿ ಮೌಲ್ಯದ ಏರಿಳಿತ, ಬಂಡವಾಳ ಹೊರಹರಿವು ಹಾಗೂ ಚೀನಾ ಮತ್ತು ಅಮೆರಿಕದ ವಾಣಿಜ್ಯ ಸಮರದ ಪರಿಣಾಮಕ್ಕೆ ಒಳಗಾಗಿ ವಾರವಿಡೀ ಚಂಚಲ ವಹಿವಾಟು ನಡೆಯಿತು. ಆದರೆ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಮಾರುಕಟ್ಟೆಯ ನಿರೀಕ್ಷೆಯಂತೆ ಇರುವುದರಿಂದ ಉತ್ತಮ ಗಳಿಕೆ ಸಾಧ್ಯವಾಯಿತು. ಎರಡೂ ಸೂಚ್ಯಂಕಗಳು ಹೊಸ ಎತ್ತರವನ್ನು ತಲುಪಿದವು.
ವಾರದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ 12.31 ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಯೆಸ್ ಬ್ಯಾಂಕ್ ಷೇರು ಶೇ 6.81 ರಷ್ಟು ಏರಿಕೆ ಕಂಡಿತು.
ಅಂಕಿ–ಅಂಶ
₹ 1,610 ಕೋಟಿ – ವಿದೇಶಿ ಬಂಡವಾಳ ಹೊರಹರಿವು
₹ 14,725 ಕೋಟಿ – ಬಿಎಸ್ಇ ವಾರದ ವಹಿವಾಟು ಮೊತ್ತ
₹ 1.42 ಲಕ್ಷ ಕೋಟಿ – ನಿಫ್ಟಿ ವಾರದ ವಹಿವಾಟು ಮೊತ್ತ
ಬರಹ ಇಷ್ಟವಾಯಿತೆ?
1
0
0
0
0
0 comments
View All