ಸೋಮವಾರ, ಜುಲೈ 26, 2021
21 °C
243 ಅಂಶ ಹೆಚ್ಚಳ ಕಂಡ ಸಂವೇದಿ ಸೂಚ್ಯಂಕ

ಷೇರುಪೇಟೆ | ಆರಂಭದಲ್ಲಿ ಕುಸಿತ, ದಿನದಂತ್ಯಕ್ಕೆ ಚೇತರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ವಹಿವಾಟಿನ ಆರಂಭದಲ್ಲಿ ಗಮನಾರ್ಹ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ದಿನದಂತ್ಯಕ್ಕೆ 243 ಅಂಶಗಳ ಚೇತರಿಕೆ ಕಂಡಿದೆ.

ವಾಲ್‌ ಸ್ಟ್ರೀಟ್‌ ಮತ್ತು ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿನ ಖರೀದಿ ನಿರಾಸಕ್ತಿಯು ಶುಕ್ರವಾರದ ಬೆಳಗಿನ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ವಿದೇಶಿ ನಿಧಿಗಳ ಹೊರ ಹರಿವು ಮತ್ತು ಕೊರಾನಾ ವೈರಾಣು ಸೋಂಕಿತರ ಪ್ರಕರಣಗಳಲ್ಲಿನ ಏರಿಕೆಯು ವಹಿವಾಟುದಾರರ ಖರೀದಿ ಆಸಕ್ತಿ ಕುಗ್ಗಿಸಿತ್ತು.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಗಳಿಕೆ ಮತ್ತು ಯುರೋಪ್‌ ಮಾರುಕಟ್ಟೆಯಲ್ಲಿ ಮರಳಿದ ಖರೀದಿ ಉತ್ಸಾಹವು ‍ಆನಂತರ ದೇಶಿ ಮಾರುಕಟ್ಟೆಯಲ್ಲಿಯೂ ಪ್ರತಿಫಲನಗೊಂಡಿತು.

ದಿನದ ವಹಿವಾಟಿನ ಆರಂಭದಲ್ಲಿ 1,190 ಅಂಶ ಕುಸಿತ ಕಂಡಿದ್ದ ಸೂಚ್ಯಂಕವು 32,348 ಅಂಶಗಳಿಗೆ ಇಳಿದಿತ್ತು. ವಹಿವಾಟಿನ ಅಂತ್ಯದಲ್ಲಿ 242 ಅಂಶ ಏರಿಕೆ ದಾಖಲಿಸಿ 33,780.89 ಅಂಶಗಳಿಗೆ ತಲುಪಿತ್ತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 70.90 ಅಂಶ ಹೆಚ್ಚಳಗೊಂಡು 9,972 ಅಂಶಗಳಿಗೆ ತಲುಪಿತ್ತು.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರು ಗರಿಷ್ಠ ಶೇ 7ರಷ್ಟು ಏರಿಕೆ ದಾಖಲಿಸಿತು. ನಂತರದ ಸ್ಥಾನದಲ್ಲಿ ಬಜಾಜ್‌ ಫೈನಾನ್ಸ್‌, ಹೀರೊ ಮೋಟೊ ಕಾರ್ಪ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಟೈಟನ್‌ ಮತ್ತು ಬಜಾಜ್‌ ಆಟೊ ಷೇರು ಗಳಿಕೆ ಕಂಡವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು