ಸೋಮವಾರ, ಮಾರ್ಚ್ 20, 2023
29 °C

ಷೇರುಪೇಟೆಯಲ್ಲಿ ಸಕಾರಾತ್ಮ ವಹಿವಾಟು: ಶೇ 1ಕ್ಕೂ ಹೆಚ್ಚು ಗಳಿಕೆ ಕಂಡ ಸೆನ್ಸೆಕ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ಸಕಾರಾತ್ಮ ವಹಿವಾಟಿನಿಂದಾಗಿ ದೇಶದ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ಶೇಕಡ 1ಕ್ಕೂ ಹೆಚ್ಚಿನ ಗಳಿಕೆ ಕಂಡುಕೊಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 847 ಅಂಶ ಏರಿಕೆ ಕಂಡು 60,747 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 242 ಅಂಶ ಹೆಚ್ಚಾಗಿ 18,101 ಅಂಶಗಳಿಗೆ ಏರಿಕೆ ಕಂಡಿತು.

ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಐ.ಟಿ. ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದು ಸಹ ಸೂಚ್ಯಂಕಗಳ ಏರಿಕೆಗೆ ನೆರವಾಯಿತು.

‘ಅಮೆರಿಕದಲ್ಲಿ ಹಣದುಬ್ಬರವು ಇಳಿಕೆ ಆಗುವ ಸೂಚನೆಗಳು ದೊರೆತಿವೆ. ಹೀಗಾಗಿ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ವೇಗವಾಗಿ ಬಡ್ಡಿದರ ಹೆಚ್ಚಿಸುವ ತನ್ನ ಬಿಗಿ ನೀತಿಯನ್ನು ತುಸು ಸಡಿಲಿಸುವ ನಿರೀಕ್ಷೆ ವ್ಯಕ್ತವಾಗಿದೆ. ಇದು ಜಾಗತಿಕ ಷೇರುಪೇಟೆಗಳ ಗಳಿಕೆಗೆ ಕಾರಣವಾಯಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಐ.ಟಿ. ವಲಯದ ಕಂಪನಿಗಳ ತ್ರೈಮಾಸಿಕ ಫಲಿತಾಂಶಕ್ಕೂ ಮುನ್ನವೇ ಕಂಪನಿಗಳ ಷೇರುಗಳು ಸೋಮವಾರ ಹೆಚ್ಚಿನ ಗಳಿಕೆ ಕಂಡವು. ಅಮೆರಿಕದ ಆರ್ಥಿಕತೆಯು ಚೇತರಿಕೆ ಕಾಣುವ ಆಶಾವಾದದಿಂದಾಗಿ ಐ.ಟಿ. ಕಂಪನಿಗಳ ಷೇರು ಮೌಲ್ಯ ಹೆಚ್ಚಾಯಿತು’ ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 2.67ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 80.67 ಡಾಲರ್‌ಗೆ ತಲುಪಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು