ಭಾನುವಾರ, ಜನವರಿ 19, 2020
22 °C

ವಾರದ ವಹಿವಾಟು ಸಕಾರಾತ್ಮಕ ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಅಮೆರಿಕ–ಇರಾನ್‌ ಸೇನಾ ಸಂಘರ್ಷದಿಂದ ಷೇರುಪೇಟೆಗಳು ಸಾಕಷ್ಟು ಏರಿಳಿತ ಕಂಡರೂ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 135 ಅಂಶ ಏರಿಕೆಯಾಗಿ 41,599 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 30 ಅಂಶ ಹೆಚ್ಚಾಗಿ 12,256 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಕಡಿಮೆಯಾಗಿದೆ. ಹೂಡಿಕೆದಾರರು ಕಂಪನಿಗಳ ತ್ರೈಮಾಸಿಕ ಫಲಿತಾಂಶ ಮತ್ತು ಕೇಂದ್ರ ಬಜೆಟ್‌ ಕಡೆಗೆ ಗಮನ ನೀಡಲಾರಂಭಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು