ಷೇರುಪೇಟೆಯಲ್ಲಿ ಖರೀದಿ ಆಸಕ್ತಿ

7
ಡಾಲರ್‌ ಎದುರು ರೂಪಾಯಿ ದರ ಚೇತರಿಕೆ

ಷೇರುಪೇಟೆಯಲ್ಲಿ ಖರೀದಿ ಆಸಕ್ತಿ

Published:
Updated:

ಮುಂಬೈ: ಶುಕ್ರವಾರದ ವಹಿವಾಟಿನಲ್ಲಿ ತೀವ್ರ ಏರಿಳಿತದ ಹೊರತಾಗಿಯೂ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ಗಮನಾರ್ಹ ಗಳಿಕೆ ಕಂಡಿತು.

ಔಷಧಿ, ಬ್ಯಾಂಕ್‌ ಷೇರುಗಳ ನೇತೃತ್ವದಲ್ಲಿನ ಖರೀದಿ ಭರಾಟೆಯ ಫಲವಾಗಿ ಪೇಟೆಯು ಗುರುವಾರದ ನಷ್ಟವನ್ನು ಭರ್ತಿ ಮಾಡಿಕೊಂಡಿತು. ಡಾಲರ್‌ ಎದುರು ರೂಪಾಯಿ ವಿನಿಮಯ ದರದಲ್ಲಿನ ಚೇತರಿಕೆಯು ಕೂಡ ಪೇಟೆಯಲ್ಲಿ ಖರೀದಿ ಉತ್ಸಾಹಕ್ಕೆ ಉತ್ತೇಜನ ನೀಡಿತು. ಸನ್‌ ಫಾರ್ಮಾ ಷೇರು ಬೆಲೆ ಶೇ 3.91ರಷ್ಟು ಏರಿಕೆ ದಾಖಲಿಸಿತು.

ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ, ಐಟಿಸಿ, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎಚ್‌ಯುಎಲ್‌ ಷೇರುಗಳು ಗರಿಷ್ಠ ಲಾಭ ಬಾಚಿಕೊಂಡವು. ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ 1.94ರಷ್ಟು ಕುಸಿತ ಕಂಡಿತು.

ಇತ್ತೀಚಿನ ಕೆಲ ವಹಿವಾಟಿನ ದಿನಗಳಲ್ಲಿ ಮಾರಾಟಕ್ಕೆ ಆದ್ಯತೆ ನೀಡಿದ್ದ ವಿದೇಶಿ ಹೂಡಿಕೆದಾರರು, ದೇಶಿ ಷೇರುಗಳ ಖರೀದಿಗೆ ಆಸಕ್ತಿ ತೋರಿಸಿದ್ದರಿಂದ ಪೇಟೆಯಲ್ಲಿ ಉತ್ಸಾಹ ಕಂಡು ಬಂದಿತು.

ಸಂವೇದಿ ಸೂಚ್ಯಂಕವು 257 ಅಂಶ ಹೆಚ್ಚಳ ಕಂಡು 35,689 ಅಂಶ ಮತ್ತು ರಾಷ್ಟ್ರೀಯ ಷೇರುಪೇಟೆಯ ‘ನಿಫ್ಟಿ’ 80 ಅಂಶಗಳಷ್ಟು ಏರಿಕೆಯಾಗಿ 10,821 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !