ಗುರುವಾರ , ನವೆಂಬರ್ 26, 2020
21 °C

ಖರೀದಿ ಹೆಚ್ಚಿಸಿದ ಮುಹೂರ್ತದ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಶನಿವಾರ ನಡೆದ ಮುಹೂರ್ತದ ವಹಿವಾಟಿನಲ್ಲಿ ಷೇರುಪೇಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು.

ಕೆಲವು ಭಾಗಗಳಲ್ಲಿ ದೀಪಾವಳಿಯನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಹೊಸ ವರ್ಷಕ್ಕೆ ಹೊಸ ಲೆಕ್ಕ ಎನ್ನುವಂತೆ ವಿಶೇಷ ವಹಿವಾಟು ಅವಧಿಯಲ್ಲಿ ಹೂಡಿಕೆದಾರರು ಹೊಸ ಖಾತೆ ತೆರೆದು ಖರೀದಿ ನಡೆಸಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ 195 ಅಂಶ ಜಿಗಿತ ಕಂಡು ದಾಖಲೆಯ 43,638 ಅಂಶಗಳಲಿಗೆ ತಲುಪಿತು. ಮಧ್ಯಂತರ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟವಾದ 43,831 ಅಂಶಗಳಿಗೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 60 ಅಂಶ ಹೆಚ್ಚಾಗಿ 12,780 ಅಂಶಗಳಿಗೆ ಏರಿಕೆಯಾಯಿತು. ಮಧ್ಯಂತರ ವಹಿವಾಟಿನಲ್ಲಿ 12,829 ಅಂಶಗಳನ್ನು ತಲುಪಿತ್ತು.

ಗರಿಷ್ಠ ಗಳಿಕೆ: ಭಾರ್ತಿ ಏರ್‌ಟೆಲ್‌, ಟಾಟಾ ಸ್ಟೀಲ್‌, ಸನ್‌ ಫಾರ್ಮಾ, ಬಜಾಜ್‌ ಫಿನ್‌ಸರ್ವ್‌, ಐಟಿಸಿ, ಇನ್ಫೊಸಿಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಒನ್‌ಜಿಸಿ ಷೇರುಗಳ ಬೆಲೆ ಶೇ 1.17ರವರೆಗೂ ಏರಿಕೆ ಕಂಡವು.

ಪವರ್‌ ಗ್ರಿಡ್‌, ಟೈಟಾನ್‌, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ಬಜಾಜ್‌ ಫೈನಾನ್ಸ್‌ ಕಂಪನಿ ಷೇರುಗಳು ಮಾತ್ರವೇ ಶೇ 0.32ರಷ್ಟು ಇಳಿಕೆ ಕಂಡವು.

ತೈಲ ಮತ್ತು ಅನಿಲ, ದೂರಸಂಪರ್ಕ, ಕೈಗಾರಿಕೆ, ರಿಯಲ್ ಎಸ್ಟೇಟ್‌, ತಂತ್ರಜ್ಞಾನ ವಲಯಗಳನ್ನೂ ಒಳಗೊಂಡು ಎಲ್ಲವೂ ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ನಡೆಸಿದವು.

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ ಶೇ 0.84ರಷ್ಟು ಹಾಗೂ ಮಿಡ್‌ ಕ್ಯಾಪ್‌ ಇಂಡೆಕ್ಸ್‌ ಶೇ 0.62ರಷ್ಟು ಏರಿಕೆ ಕಂಡಿವೆ.

ಬಲಿಪಾಡ್ಯಮಿ ಪ್ರಯುಕ್ತ ಸೋಮವಾರ ಷೇರುಪೇಟೆ ವಹಿವಾಟಿಗೆ ರಜೆ ಇರಲಿದೆ.

2019ರ ದೀಪಾವಳಿಯಿಂದ 2020ರ ದೀಪಾವಳಿ ಅವಧಿಯಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ 4,385 ಅಂಶ (ಶೇ 11.22) ಹಾಗೂ ಎನ್‌ಎಸ್‌ಇ ನಿಫ್ಟಿ 1,136 ಅಂಶ (ಶೇ 9.80) ಏರಿಕೆ ದಾಖಲಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು