ಸೋಮವಾರ, ಜೂನ್ 21, 2021
28 °C

ಕೋವಿಡ್ ಪ್ರಕರಣ ಇಳಿಕೆ: ಎರಡು ತಿಂಗಳ ಗರಿಷ್ಠಕ್ಕೆ ನಿಫ್ಟಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

 Credit: Reuters Photo

ಮುಂಬೈ: ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆ ಕಂಡುಬರುತ್ತಿದೆ. ಸತತ ಎರಡನೇ ದಿನವೂ ಮೂರು ಲಕ್ಷದ ಆಸುಪಾಸಿನಲ್ಲಿ ಹೊಸ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 50 ಕಳೆದ ಎರಡು ತಿಂಗಳ ಗರಿಷ್ಠಕ್ಕೆ ತಲುಪಿದೆ.

ಹಣಕಾಸು ಮತ್ತು ಲೋಹದ ಷೇರುಗಳು ಹೆಚ್ಚಿನ ವಹಿವಾಟು ನಡೆಸಿದ್ದರಿಂದ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 202.75 ಅಂಶಗಳ ಏರಿಕೆಯೊಂದಿಗೆ 15,125.90 ದಾಖಲಿಸಿದೆ. ಬ್ಯಾಂಕಿಂಗ್, ಹಣಕಾಸು ಮತ್ತು ಲೋಹದ ಕಂಪನಿಗಳ ಷೇರು ಮೌಲ್ಯ ಏರಿಕೆ ಕಂಡಿರುವುದು ನಿಫ್ಟಿ ಏರಿಕೆಗೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ), 723.31 ಅಂಶಗಳ ಏರಿಕೆಯೊಂದಿಗೆ 50,304.04ರಲ್ಲಿ ಸ್ಥಿರವಾಗಿದೆ.

ಕೋವಿಡ್ ಪ್ರಕರಣ ಇಳಿಕೆ ಸುದ್ದಿ ಷೇರು ಮಾರುಕಟ್ಟೆಗೆ ಹುರುಪು ನೀಡಿದ್ದು, ಮಂಗಳವಾರ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ.

ಖಾಸಗಿ ವಲಯದ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಾದ ಎಚ್‌ಡಿಎಫ್‌ಸಿ ಶೇ 2.34 ಏರಿಕೆ ದಾಖಲಿಸಿದರೆ, ಐಸಿಐಸಿಐ ಬ್ಯಾಂಕ್ ಶೇ 1.9 ಏರಿಕೆ ಕಂಡಿದೆ. ಮಾರ್ಚ್ 12ರ ಬಳಿಕ ಇದು ಗರಿಷ್ಠ ಏರಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು