ಭಾನುವಾರ, ಡಿಸೆಂಬರ್ 6, 2020
20 °C

ರಿಲಯನ್ಸ್ ತೆಕ್ಕೆಗೆ ನೆಟ್‌ಮೆಡ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನ್‌ಲೈನ್‌ ಮೂಲಕ ಔಷಧ ಮಾರಾಟ ಮಾಡುವ ನೆಟ್‌ ಮೆಡ್ಸ್‌ ಕಂಪನಿಯಲ್ಲಿನ ಅತಿಹೆಚ್ಚಿನ ಷೇರುಪಾಲನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ತನ್ನದಾಗಿಸಿಕೊಂಡಿದೆ.

ಈ ಖರೀದಿಯ ಮೊತ್ತ ₹ 620 ಕೋಟಿ ಎಂದು ರಿಲಯನ್ಸ್ ಹೇಳಿದೆ. ನೆಟ್‌ಮೆಡ್ಸ್‌ನಲ್ಲಿ ರಿಲಯನ್ಸ್‌ ಈಗ ಶೇಕಡ 60ರಷ್ಟು ಪಾಲನ್ನು ಹೊಂದಿದೆ. ಬೆಂಗಳೂರಿನಲ್ಲಿ ಆನ್‌ಲೈನ್‌ ಮೂಲಕ ಔಷಧಗಳ ಮಾರಾಟಕ್ಕೆ ಅಮೆಜಾನ್‌ ಚಾಲನೆ ನೀಡಿದ ಬೆನ್ನಲ್ಲೇ ಈ ಖರೀದಿ ನಡೆದಿದೆ.

‘ಗುಣ ಮಟ್ಟ ಹಾಗೂ ಕೈಗೆಟಕುವ ದರದ ಆರೋಗ್ಯ ಸೇವಾ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ’ ಎಂದು ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು