ಗುರುವಾರ , ಡಿಸೆಂಬರ್ 12, 2019
17 °C

ಷೇರುಮಾರುಕಟ್ಟೆ: ಸೂಚ್ಯಂಕ 718 ಅಂಶ ಜಿಗಿತ

Published:
Updated:

ಮುಂಬೈ : ದೇಶದ ಷೇರುಪೇಟೆಗಳಲ್ಲಿ ಸೋಮವಾರ ಉತ್ತಮ ಖರೀದಿ ವಹಿವಾಟು ನಡೆಯಿತು. ಬ್ಯಾಂಕಿಂಗ್‌ ವಲಯದ ಷೇರುಗಳು ಅತಿ ಹೆಚ್ಚಿನ ಗಳಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 718 ಅಂಶ ಜಿಗಿತ ಕಂಡು 34 ಸಾವಿರದ ಗಡಿ ದಾಟಿತು. 34,067 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 220 ಅಂಶ ಹೆಚ್ಚಾಗಿ 10,250 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಐಸಿಐಸಿಐ ಬ್ಯಾಂಕ್‌ ಅತಿ ಹೆಚ್ಚಿನ ಶೇ 11ರಷ್ಟು ಗಳಿಕೆ ಕಂಡುಕೊಂಡಿದ್ದು, ಎಸ್‌ಬಿಐ ಶೇ 8.04ರಷ್ಟು ಏರಿಕೆ ಕಂಡಿದೆ.

ನಗದು ಹರಿವು ಹೆಚ್ಚಿಸಲು, ಸರ್ಕಾರಿ ಸಾಲಪತ್ರಗಳನ್ನು ಖರೀದಿಸುವ ಮೂಲಕ ನವೆಂಬರ್‌ನಲ್ಲಿ ₹ 40 ಸಾವಿರ ಕೋಟಿ ಪೂರೈಕೆ ಮಾಡಲು ಆರ್‌ಬಿಐ ನಿರ್ಧರಿಸಿದೆ. ಇದು ಸಹ ವಹಿವಾಟಿನ ಚೇತರಿಕೆಗೆ ನೆರವಾಯಿತು. 

ಬ್ರೆಂಟ್‌ ಕಚ್ಚಾ ತೈಲ ದರ 31 ಸೆಂಟ್‌ಗಳಷ್ಟು ಕಡಿಮೆಯಾಗಿ ಒಂದು ಬ್ಯಾರೆಲ್‌ಗೆ 77.31 ಡಾಲರ್‌ನಂತೆ ಮಾರಾಟವಾಯಿತು. ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ 28 ಸೆಂಟ್‌ ಇಳಿಕೆ ಕಂಡು ಒಂದು ಬ್ಯಾರೆಲ್‌ಗೆ 67.31 ಡಾಲರ್‌ಗೆ ತಲುಪಿತು.

ಪ್ರತಿಕ್ರಿಯಿಸಿ (+)