ಚೇತರಿಕೆ ಕಂಡ ಸೂಚ್ಯಂಕ

7

ಚೇತರಿಕೆ ಕಂಡ ಸೂಚ್ಯಂಕ

Published:
Updated:

ಮುಂಬೈ: ಕಚ್ಚಾ ತೈಲದ ಬೆಲೆ ಇಳಿಕೆ ಮತ್ತು ಡಾಲರ್‌ ಎದುರು ರೂಪಾಯಿ ವಿನಿಮಯ ದರದಲ್ಲಿನ ಚೇತರಿಕೆಯ ಫಲವಾಗಿ ಮುಂಬೈ ಷೇರುಪೇಟೆಯಲ್ಲಿ ಬುಧವಾರ ಚೇತರಿಕೆ ಕಂಡು ಬಂದಿತು.

ಮಾರಾಟ ಮತ್ತು ಖರೀದಿ ಭರಾಟೆಯ ಕಾರಣಕ್ಕೆ ಸೂಚ್ಯಂಕವು 575 ಅಂಶಗಳಷ್ಟು ಏರಿಳಿತ ಕಂಡಿತು. ಆರಂಭದಲ್ಲಿ ಚೇತರಿಕೆ ಕಂಡಿದ್ದ ಸೂಚ್ಯಂಕವು ಮಾರಾಟ ಒತ್ತಡವು ಹಠಾತ್ತಾಗಿ ಹೆಚ್ಚಳಗೊಂಡ ಕಾರಣಕ್ಕೆ 33,726 ಅಂಶಗಳವರೆಗೆ ಕುಸಿದಿತ್ತು. ನಂತರ ಚೇತರಿಸಿಕೊಂಡು 34,033 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ನಾಲ್ಕು ವಹಿವಾಟಿನ ದಿನಗಳ ನಂತರ ಸಂವೇದಿ ಸೂಚ್ಯಂಕವು 187 ಅಂಶಗಳಷ್ಟು ಚೇತರಿಕೆ ಕಂಡು 34 ಸಾವಿರ ಅಂಶಗಳ ಗಡಿ ದಾಟಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ ಏರಿಳಿತದ ಹೊರತಾಗಿಯೂ ಅಂತಿಮವಾಗಿ 78 ಅಂಶ ಏರಿಕೆ ದಾಖಲಿಸಿ 10,224 ಅಂಶಗಳಿಗೆ ತಲುಪಿತು.

ವಿದೇಶಿ ವಿನಿಮಯ ಮಾರುಕಟ್ಟೆಯ ವಹಿವಾಟಿನ ಮಧ್ಯದಲ್ಲಿ ಡಾಲರ್‌ ಎದುರು ರೂಪಾಯಿ ಬೆಲೆಯು 42 ಪೈಸೆಗಳಷ್ಟು (73.15) ಚೇತರಿಕೆ ಕಂಡಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !