ಸೂಚ್ಯಂಕ 262 ಅಂಶ ಇಳಿಕೆ

7
ಅಮೆರಿಕ–ಚೀನಾ ವಾಣಿಜ್ಯ ಸಮರ

ಸೂಚ್ಯಂಕ 262 ಅಂಶ ಇಳಿಕೆ

Published:
Updated:

ಮುಂಬೈ: ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಸಮರದ ಭೀತಿಯಿಂದ ದೇಶದ ಷೇರುಪೇಟೆಗಳಲ್ಲಿ ಎರಡನೇ ದಿನವೂ ವಹಿವಾಟು ಇಳಿಕೆ ಕಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 262 ಅಂಶ ಇಳಿಕೆ ಕಂಡು 35,286 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 89 ಅಂಶ ಇಳಿಕೆಯಾಗಿ 10,710 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಚೀನಾದ ಸರಕುಗಳ ಮೇಲೆ ಹೆಚ್ಚುವರಿ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಬೆದರಿಕೆ ಒಡ್ಡಿದ್ದಾರೆ. ಅದಕ್ಕೆ ತಕ್ಕ ಉತ್ತರ ನೀಡುವುದಾಗಿ ಚೀನಾ ಸವಾಲೊಡ್ಡಿದೆ. ಇದರಿಂದ ವಿಶ್ವದ ಎರಡು ಅತಿ ದೊಡ್ಡ ಆರ್ಥಿಕತೆಗಳ ಮಧ್ಯೆ ಮತ್ತೆ ವಾಣಿಜ್ಯ ಸಮರ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಒತ್ತು ನೀಡಿರುವುದು ಹಾಗೂ ರೂಪಾಯಿ ಮೌಲ್ಯ ಇಳಿಕೆಯಿಂದಲೂ ಸೂಚ್ಯಂಕ ಇಳಿಕೆ ಕಂಡಿದೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹಾಂಕಾಂಗ್‌ನ ಹಾಂಗ್‌ ಸೆಂಗ್‌ ಸೇ 2.94, ಜಪಾನ್‌ನ ನಿಕೇಯ್‌ ಶೇ 1.73 ಮತ್ತು ಚೀನಾದ ಶಾಂಘೈ ಕಂಪೋಸಿಟ್‌ ಸೂಚ್ಯಂಕ ಶೇ 3.82 ರಷ್ಟು ಇಳಿಕೆಯಾಗಿವೆ.

ಯುರೋಪ್‌ ವಲಯದಲ್ಲಿ ಫ್ರಾಂಕ್‌ಫರ್ಟ್‌ ಶೇ 1.58, ಪ್ಯಾರಿಸ್‌ ಸಿಎಸಿ 40 ಶೇ 1.16 ಮತ್ತು ಲಂಡನ್‌ನ ಎಫ್‌ಟಿಎಸ್‌ಇ ಶೇ 0.74 ರಷ್ಟು ಇಳಿಕೆ ಕಂಡಿವೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !