ಸಾವಿರ ಅಂಶ ಕುಸಿದ ಸೆನ್ಸೆಕ್ಸ್: ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

7
ದಿನದ ಆರಂಭದ ವಹಿವಾಟಿನ ವೇಳೆ ಮಹಾ ಪತನ

ಸಾವಿರ ಅಂಶ ಕುಸಿದ ಸೆನ್ಸೆಕ್ಸ್: ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

Published:
Updated:

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಕುಸಿತದ ಪ್ರಭಾವದಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಬೆಳಿಗ್ಗೆ ಸಾವಿರ ಅಂಶ ಕುಸಿತ ಕಂಡಿದೆ.

ದಿನದ ಆರಂಭದ ವಹಿವಾಟಿನ ವೇಳೆ ಸೆನ್ಸೆಕ್ಸ್ 1,037.36 ಅಂಶ ಕುಸಿತ ಕಂಡಿತು. ನಿಫ್ಟಿ 10,138.60 ಅಂಶಕ್ಕೆ ಕುಸಿಯಿತು. ಇದು ನಿನ್ನೆ ವಹಿವಾಟು ಅಂತ್ಯಗೊಳ್ಳುವ ಸಂದರ್ಭದಲ್ಲಿ ಇದ್ದುದಕ್ಕಿಂತ 321.5 ಅಂಶ ಕಡಿಮೆಯಾಗಿದೆ. ಸೆನ್ಸೆಕ್ಸ್‌, ನಿಫ್ಟಿ ಕ್ರಮವಾಗಿ 34,063.82 ಮತ್ತು 10,169.80 ಅಂಶದೊಂದಿಗೆ ವಹಿವಾಟು ಆರಂಭಿಸಿದ್ದವು.

ಜಾಗತಿಕವಾಗಿ ಷೇರುಮಾರುಕಟ್ಟೆಯಲ್ಲಿ ಮತ್ತು ಏಷ್ಯದಾದ್ಯಂತ ವಹಿವಾಟು ಕುಸಿತ ದಾಖಲಿಸಿದೆ ಎಂದು ತಜ್ಞರು ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ, ರಿಲಯನ್ಸ್‌ ಇಂಡಸ್ಟ್ರೀಸ್, ಇನ್ಫೊಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳು ಕುಸಿತ ಕಂಡಿವೆ. ಟಾಟಾ ಸ್ಟೀಲ್, ವೇದಾಂತ, ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಎಕ್ಸಿಸ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಸೆನ್ಸೆಕ್ಸ್‌ನಲ್ಲಿ ಕುಸಿತ ದಾಖಲಿಸಿದ ಅಗ್ರ ಐದು ಕಂಪನಿಗಳಾಗಿವೆ.

ಬೆಳಿಗ್ಗೆ 11 ಗಂಟೆ ವೇಳೆಗೆ ಸೆನ್ಸೆಕ್ಸ್ 825.16 ಅಂಶ ಇಳಿಕೆಯೊಂದಿಗೆ 33,935.73ರಷ್ಟಾಗಿದ್ದು, ನಿಫ್ಟಿ 258.90 ಅಂಶ ಇಳಿಕೆಯೊಂದಿಗೆ 10,201.20ರಷ್ಟಾಗಿದೆ.

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 24 ಪೈಸೆಯಷ್ಟು ಇಳಿಕೆಯಾಗಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಂತಾಗಿದೆ. ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯ 74.45ಕ್ಕೆ ತಲುಪಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 4

  Sad
 • 1

  Frustrated
 • 1

  Angry

Comments:

0 comments

Write the first review for this !