ಷೇರುಪೇಟೆ: ಉಡುಗಿದ ಖರೀದಿ ಉತ್ಸಾಹ

7
140 ಅಂಶ ಕುಸಿತ ಕಂಡ ಸಂವೇದಿ ಸೂಚ್ಯಂಕ

ಷೇರುಪೇಟೆ: ಉಡುಗಿದ ಖರೀದಿ ಉತ್ಸಾಹ

Published:
Updated:

ಮುಂಬೈ: ಡಾಲರ್‌ ಎದುರು ರೂಪಾಯಿ ವಿನಿಮಯ ದರವು ಸತತವಾಗಿ ಕುಸಿಯುತ್ತಿರುವುದು ದೇಶಿ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಬುಧವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು 140 ಅಂಶಗಳಷ್ಟು ಕುಸಿತ ಕಂಡಿದೆ.

ದುರ್ಬಲ ರೂಪಾಯಿ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಷೇರುಪೇಟೆಗಳಲ್ಲಿನ ಮಾರಾಟ ಒತ್ತಡವು ಪೇಟೆಯಲ್ಲಿನ ಖರೀದಿ ಉತ್ಸಾಹ ಉಡುಗಿಸಿದೆ.

ದಿನದ ಅಂತ್ಯಕ್ಕೆ ಸಂವೇದಿ ಸೂಚ್ಯಂಕವು 139.61 ಅಂಶಗಳಷ್ಟು ಕುಸಿತ ಕಂಡಿತು. ಇದರಿಂದಾಗಿ ಸೂಚ್ಯಂಕವು ಎರಡು ವಾರಗಳ ಕನಿಷ್ಠ ಮಟ್ಟಕ್ಕೆ (38,018 ಅಂಶ) ಇಳಿದಂತಾಗಿದೆ. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 43 ಅಂಶ ಇಳಿಕೆಯಾಗಿ 11,476 ಅಂಶಗಳಿಗೆ ತಲುಪಿದೆ.

ಸತತ ಆರನೇ ವಹಿವಾಟಿನ ದಿನವೂ ಪೇಟೆಯಲ್ಲಿ ಮಾರಾಟ ಒತ್ತಡ ಕಂಡು ಬಂದಿದೆ. ಈ ಅವಧಿಯಲ್ಲಿ ಸೂಚ್ಯಂಕವು ಒಟ್ಟಾರೆ 878 ಅಂಶಗಳಿಗೆ
ಎರವಾಗಿದೆ.

ವಾಣಿಜ್ಯ ಸಮರಕ್ಕೆ ಸಂಬಂಧಿಸಿದ ಕಳವಳದ ಫಲವಾಗಿ ಜಾಗತಿಕ ಷೇರುಪೇಟೆಗಳಲ್ಲಿಯೂ ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆ ಒದಗಿದೆ. ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಸೇವಾ ವಲಯದ ಪ್ರಗತಿ ಕುಸಿತ ಕಂಡಿರುವುದು ಕೂಡ ಪೇಟೆಯಲ್ಲಿ ನಿರಾಶೆಯ ಕಾರ್ಮೋಡ ಕವಿಯುವಂತೆ ಮಾಡಿದೆ.

ಮಾರಾಟ ಒತ್ತಡ: ಎಲ್ಲ ವಲಯಗಳ ಷೇರುಗಳಲ್ಲಿ ಮಾರಾಟ ಒತ್ತಡ ಕಂಡು ಬಂದಿತು. ಮಧ್ಯಮಗಾತ್ರದ ಮತ್ತು ಗರಿಷ್ಠ ಮೌಲ್ಯದ ಷೇರುಗಳು ತೀವ್ರ ನಷ್ಟಕ್ಕೆ ಗುರಿಯಾದವು.

‘ಅಲ್ಪಾವಧಿಯಲ್ಲಿ ಲಾಭದಲ್ಲಿನ ತೀವ್ರ ಏರಿಳಿತ ಮತ್ತು ವಿತ್ತೀಯ ಕೊರತೆ ಹೆಚ್ಚಳವು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಲಿದೆ. ಹೀಗಾಗಿ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !