ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ಇಳಿಕೆ: ಸೂಚ್ಯಂಕ 464 ಅಂಶ ಜಿಗಿತ

ಆರ್‌ಬಿಐನಿಂದ ಬಡ್ಡಿದರ ಕಡಿತ ನಿರೀಕ್ಷೆ
Last Updated 15 ಜನವರಿ 2019, 16:11 IST
ಅಕ್ಷರ ಗಾತ್ರ

ಮುಂಬೈ: ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ 18 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಹೀಗಾಗಿ ಆರ್‌ಬಿಐ ಬಡ್ಡಿದರ ತಗ್ಗಿಸಲಿದೆ ಎಂದು ಹೂಡಿಕೆದಾರರು ಭಾವಿಸಿದ್ದಾರೆ. ಈ ನಿರೀಕ್ಷೆಯಿಂದ ಷೇರುಪೇಟೆಗಳಲ್ಲಿ ಮಂಗಳವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 465 ಅಂಶ ಜಿಗಿತ ಕಂಡು 36,318 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 149 ಅಂಶ ಹೆಚ್ಚಾಗಿ 10,886 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಬಡ್ಡಿ ದರಕ್ಕೆ ಸಂಬಂಧಿಸಿದ ಸೂಕ್ಷ್ಮ ವಲಯಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು.

ಯೆಸ್‌ ಬ್ಯಾಂಕ್‌ (ಶೇ 3.86), ಇನ್ಫೊಸಿಸ್‌ (ಶೇ 3.66), ವೇದಾಂತ (ಶೇ 3.03), ರಿಲಯನ್ಸ್ ಇಂಡಸ್ಟ್ರೀಸ್‌ (ಶೇ 3.02) ಹಾಗೂ ಟಿಸಿಎಸ್‌ ಷೇರುಗಳು (ಶೇ 2.74) ಏರಿಕೆ ಕಂಡವು.

ಬಜಾಜ್‌ ಫೈನಾನ್ಸ್‌, ಭಾರ್ತಿ ಏರ್‌ಟೆಲ್‌, ಟಾಟಾ ಮೋಟರ್ಸ್‌, ಹೀರೊ ಮೋಟೊಕಾರ್ಪ್‌, ಏಷ್ಯನ್‌ ಪೇಂಟ್ಸ್‌, ಎಚ್‌ಯುಎಲ್‌, ಒಎನ್‌ಜಿಸಿ ಷೇರುಗಳು ಶೇ 2.87ರವರೆಗೂ ಏರಿಕೆಯಾಗಿವೆ.

71ಕ್ಕಿಂತ ಕೆಳಗಿಳಿದ ರೂಪಾಯಿ

ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ₹ 71ರ ಮಟ್ಟಕ್ಕಿಂತಲೂ ಕೆಳಗೆ ಇಳಿದಿದೆ.

ಮಂಗಳವಾರ 13 ಪೈಸೆ ಕಡಿಮೆಯಾಗಿ ಒಂದು ಡಾಲರ್‌ಗೆ ₹ 71.05ರಂತೆ ವಿನಿಮಯಗೊಂಡಿತು. ಮೂರು ವಹಿವಾಟು ಅವಧಿಯಲ್ಲಿ ರೂಪಾಯಿ ಮೌಲ್ಯ 64 ‍ಪೈಸೆಗಳಷ್ಟು ಇಳಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಮತ್ತು ಡಾಲರ್ ಮೌಲ್ಯ ವೃದ್ಧಿಯಿಂದ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರ ಮಂಗಳವಾರ ಶೇ 1.39 ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 59.81 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT