ಗುರುವಾರ , ಮೇ 28, 2020
27 °C

ವಹಿವಾಟು ಆರಂಭದಲ್ಲೇ ಸೆನ್ಸೆಕ್ಸ್‌ 1,100 ಅಂಶ ಜಿಗಿತ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಷೇರುಪೇಟೆಗಳಲ್ಲಿ ಗೂಳಿ ಓಟ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾದ ಅವಧಿಯಿಂದ ಷೇರುಪೇಟೆಗಳಲ್ಲಿ ಗಳಿಕೆ–ಇಳಿಕೆ ಆಟ ನಿರಂತರವಾಗಿದೆ. ನಿನ್ನೆ ಇಳಿಮುಖವಾಗಿದ್ದ ಷೇರುಪೇಟೆಗಳು ಶುಕ್ರವಾರ ದಿಢೀರ್‌ ಜಿಗಿತ ಕಂಡಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,100 ಅಂಶ ಏರಿಕೆಯಾಗಿದೆ. 

ಆರಂಭದಿಂದಲೇ ಷೇರುಪೇಟೆಗಳಲ್ಲಿ ವಹಿವಾಟು ಚೇತರಿಕೆ ಕಂಡು ಬಂದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 293.70 ಅಂಶ ಹೆಚ್ಚಳಗೊಂಡು 9,286.50 ಅಂಶ ತಲುಪಿದೆ. ಸೆನ್ಸೆಕ್ಸ್‌ 1,109.09 ಅಂಶಗಳ ಏರಿಕೆಯೊಂದಿಗೆ 31,711.70 ಅಂಶ ಮುಟ್ಟಿದೆ. 

ಬ್ಯಾಂಕ್‌, ಐಟಿ ಹಾಗೂ ಫಾರ್ಮಾ ವಲಯದ ಷೇರುಗಳು ಗಳಿಕೆ ದಾಖಲಿಸಿವೆ. ಟಿಸಿಎಸ್‌ ಷೇರು ಬೆಲೆ ಶೇ 6ರಷ್ಟು ಏರಿಕೆಯಾಗಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಹಲವು ಪ್ರಕಟಣೆಗಳನ್ನು ಮಾಡಬಹುದು ಎಂಬ ಭರವಸೆಯಲ್ಲಿ ಷೇರುಪೇಟೆಗಳಲ್ಲಿ ವಹಿವಾಟು ಜಿಗಿತ ಕಂಡಿದೆ.

ಗುರುವಾರ ಸೆನ್ಸೆಕ್ಸ್ 222.80 ಅಂಶ ಇಳಿಕೆಯಾಗಿ 30,602.61ರಲ್ಲಿ ವಹಿವಾಟು ಮುಕ್ತಾಯವಾಗಿತ್ತು. ನಿಫ್ಟಿ 67.50 ಕಡಿಮೆಯಾಗಿ 8,992.80 ಅಂಶ ತಲುಪಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು