ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

51 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

Last Updated 5 ಫೆಬ್ರುವರಿ 2021, 12:15 IST
ಅಕ್ಷರ ಗಾತ್ರ

ಮುಂಬೈ: ಐದು ದಿನಗಳಿಂದ ಸತತವಾಗಿ ಏರುಗತಿಯಲ್ಲಿ ಸಾಗಿರುವ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಶುಕ್ರವಾರದ ಕೊನೆಯಲ್ಲಿ ಇದುವರೆಗಿನ ಗರಿಷ್ಠ ಮಟ್ಟವಾದ 50,731 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ವಹಿವಾಟಿನ ನಡುವಿನಲ್ಲಿ 51 ಸಾವಿರದ ಗಡಿಯನ್ನು ದಾಟಿತ್ತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 28 ಅಂಶ ಏರಿಕೆ ಕಂಡು, 14,924ರಲ್ಲಿ ವಹಿವಾಟು ಕೊನೆಗೊಳಿಸಿತು. ವಹಿವಾಟಿನ ನಡುವಿನಲ್ಲಿ ಒಮ್ಮೆ 15 ಸಾವಿರದ ಗಡಿಯನ್ನು ದಾಟಿತ್ತು.

ಸೆನ್ಸೆಕ್ಸ್‌ನಲ್ಲಿ ಎಸ್‌ಬಿಐ ಷೇರುಗಳು ಅತಿಹೆಚ್ಚಿನ ಗಳಿಕೆ ದಾಖಲಿಸಿದವು. ಶೇ 10.69ರಷ್ಟು ಏರಿಕೆ ಕಂಡವು. ಕೋಟಕ್ ಬ್ಯಾಂಕ್, ಡಾ ರೆಡ್ಡೀಸ್, ಅಲ್ಟ್ರಾಟೆಕ್‌ ಸಿಮೆಂಟ್, ಐಟಿಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಕೂಡ ಗಳಿಕೆ ಕಂಡವು. ಎಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್, ಮಾರುತಿ ಮತ್ತು ಎಚ್‌ಸಿಎಲ್‌ ಟೆಕ್‌ ಷೇರುಗಳು ಇಳಿಕೆ ಕಂಡವು.

ಫೆಬ್ರುವರಿ 1ರಿಂದ ಶುಕ್ರವಾರದವರೆಗಿನ ಅವಧಿಯಲ್ಲಿ ಸೆನ್ಸೆಕ್ಸ್ ಒಟ್ಟು 4,445 ಅಂಶ ಏರಿಕೆ ದಾಖಲಿಸಿದೆ. ನಿಫ್ಟಿ 1,289 ಅಂಶ ಏರಿಕೆ ಕಂಡಿದೆ. ಹಾಂಗ್‌ಕಾಂಗ್‌, ಸೋಲ್‌ ಮತ್ತು ಟೋಕಿಯೊ ಷೇರುಪೇಟೆಗಳು ಶುಕ್ರವಾರದ ವಹಿವಾಟಿನಲ್ಲಿ ಗಳಿಕೆ ಕಂಡವು. ಶಾಂಘೈ ಷೇರುಪೇಟೆ ಇಳಿಕೆ ದಾಖಲಿಸಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡ 0.95ರಷ್ಟು ಹೆಚ್ಚಳವಾಗಿದೆ. ಇದು ಪ್ರತಿ ಬ್ಯಾರೆಲ್‌ಗೆ 59.56 ಅಮೆರಿಕನ್ ಡಾಲರ್‌ಗಳಿಗೆ ಮಾರಾಟವಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೂರು ಪೈಸೆ ಚೇತರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT