ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಚೇತರಿಸಿಕೊಂಡ ಸೆನ್ಸೆಕ್ಸ್

Last Updated 26 ಮಾರ್ಚ್ 2021, 13:57 IST
ಅಕ್ಷರ ಗಾತ್ರ

ಮುಂಬೈ: ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 568 ಅಂಶ ಏರಿಕೆ ದಾಖಲಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವಾದ ನಿಫ್ಟಿ 182 ಅಂಶ ಏರಿಕೆ ಕಂಡಿತು. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು ದೇಶಿ ಮಾರುಕಟ್ಟೆಗಳ ಮೇಲೆಯೂ ಪರಿಣಾಮ ಬೀರಿತು.

ಸೆನ್ಸೆಕ್ಸ್‌ನಲ್ಲಿ ಅತಿಹೆಚ್ಚಿನ ಏರಿಕೆಯನ್ನು ದಾಖಲಿಸಿದ್ದು ಬಜಾಜ್‌ ಫೈನಾನ್ಸ್‌ ಕಂಪನಿಯ ಷೇರುಗಳು. ಟೈಟಾನ್, ಏಷ್ಯನ್ ಪೇಂಟ್ಸ್, ಎಚ್‌ಯುಎಲ್‌, ಭಾರ್ತಿ ಏರ್‌ಟೆಲ್‌, ಬಜಾಜ್ ಆಟೊ ಮತ್ತು ನೆಸ್ಲೆ ಕಂಪನಿಯ ಷೇರುಗಳೂ ಏರಿಕೆ ಕಂಡವು.

ಪವರ್‌ ಗ್ರಿಡ್, ಇಂಡಸ್‌ಇಂಡ್‌ ಬ್ಯಾಂಕ್‌, ಐಟಿಸಿ ಮತ್ತು ಮಾರುತಿ ಷೇರುಗಳು ಇಳಿಕೆ ಕಂಡವು. ‘ಹಾಲಿ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಚೆನ್ನಾಗಿ ನಡೆದಿರುವ ಸೂಚನೆಗಳು ಇವೆ’ ಎಂದು ಮಾರುಕಟ್ಟೆಯ ಚೇತರಿಕೆಗೆ ಒಂದು ಕಾರಣವನ್ನು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ನೀಡಿದರು.

ಕೋವಿಡ್–19ರ ಎರಡನೆಯ ಅಲೆ ಹಾಗೂ ಕೆಲವು ಷೇರುಗಳ ಬೆಲೆಯು ತೀರಾ ದುಬಾರಿ ಆಗಿರುವುದು ಮಾರುಕಟ್ಟೆಯಲ್ಲಿ ಅನಿಶ್ಚಿತ ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ರೂಪಾಯಿ ಚೇತರಿಕೆ: ಮೂರು ದಿನಗಳಿಂದ ಕುಸಿತದ ಹಾದಿಯಲ್ಲಿ ಇದ್ದ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಶುಕ್ರವಾರ 11 ಪೈಸೆ ಚೇತರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT