ಬುಧವಾರ, ಏಪ್ರಿಲ್ 1, 2020
19 °C

ಸೂಚ್ಯಂಕ 429 ಅಂಶ ಜಿಗಿತ: ಕೋವಿಡ್‌ ಪರಿಣಾಮ ತಡೆಯಲು ಕೇಂದ್ರದ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳು ನಾಲ್ಕು ದಿನಗಳ ನಕಾರಾತ್ಮಕ ವಹಿವಾಟಿನಿಂದ ಬುಧವಾರ ಹೊರಬಂದಿವೆ. ಹೂಡಿಕೆ ಚಟುವಟಿಕೆ ಹೆಚ್ಚಾಗಿ ಸೂಚ್ಯಂಕಗಳು ಏರಿಕೆ ಕಂಡಿವೆ.

‘ಕೋವಿಡ್‌–19’ ವೈರಸ್‌ ಸೋಂಕಿಗೆ ತುತ್ತಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಇದರ ಜತೆಗೆ ದೇಶಿ ಉದ್ಯಮದ ಮೇಲೆ ವೈರಸ್‌ನಿಂದ ಆಗಬಹುದಾದ ಪರಿಣಾಮ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಈ ಅಂಶಗಳು ಸೂಚ್ಯಂಕದ ಏರಿಕೆಗೆ ನೆರವಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 429 ಅಂಶ ಜಿಗಿತ ಕಂಡು 41,323 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಹೂಡಿಕೆದಾರರ ಸಂಪತ್ತು ₹ 2.06 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 156.65 ಲಕ್ಷ ಕೋಟಿಗಳಿಂದ ₹ 158.71 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು