ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಕೆಯ ಹಾದಿಗೆ ಸೆನ್ಸೆಕ್ಸ್

Last Updated 19 ಮಾರ್ಚ್ 2021, 15:33 IST
ಅಕ್ಷರ ಗಾತ್ರ

ಮುಂಬೈ: ಹೂಡಿಕೆದಾರರು ಶುಕ್ರವಾರದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಎಫ್‌ಎಂಸಿಜಿ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳು) ಮತ್ತು ಐ.ಟಿ. ವಲಯದ ಷೇರುಗಳ ಖರೀದಿಗೆ ಉತ್ಸಾಹ ತೋರಿಸಿದರು. ಇದರಿಂದಾಗಿ ದೇಶದ ಷೇರುಪೇಟೆಗಳು ಐದು ದಿನಗಳ ನಕಾರಾತ್ಮಕ ವಹಿವಾಟಿನಿಂದ ಹೊರಬಂದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ 641 ಅಂಶ ಏರಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 186 ಅಂಶ ಚೇತರಿಕೆ ದಾಖಲಿಸಿತು.

ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದರೂ, ಸ್ಥಳೀಯವಾಗಿ ಅಲ್ಲಲ್ಲಿ ಜಾರಿಯಾಗಿರುವ ಲಾಕ್‌ಡೌನ್‌ ಕ್ರಮಗಳು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡುವಂತಿದ್ದರೂ ವರ್ತಕರು, ಹೂಡಿಕೆದಾರರು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಎನ್‌ಟಿಪಿಸಿ, ಎಚ್‌ಯುಎಲ್‌, ಪವರ್‌ ಗ್ರಿಡ್‌, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ, ಅಲ್ಟ್ರಾಟೆಕ್‌ ಸಿಮೆಂಟ್ ಮತ್ತು ಎಚ್‌ಸಿಎಲ್‌ ಟೆಕ್‌ ಕಂಪನಿ ಷೇರುಗಳು ಹೆಚ್ಚಿನ ಗಳಿಕೆ ಕಂಡವು. ಎಲ್‌ಆ್ಯಂಡ್‌ಟಿ, ಟೆಕ್‌ ಮಹೀಂದ್ರ, ಬಜಾಜ್ ಆಟೊ ಮತ್ತು ಟೈಟಾನ್ ಷೇರುಗಳು ಇಳಿಕೆ ದಾಖಲಿಸಿದವು. ಈ ವಾರದ ಅವಧಿಯಲ್ಲಿ ಸೆನ್ಸೆಕ್ಸ್‌ ಒಟ್ಟು 933 ಅಂಶಗಳಷ್ಟು, ನಿಫ್ಟಿ 286 ಅಂಶಗಳಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT