ಶನಿವಾರ, ಡಿಸೆಂಬರ್ 5, 2020
24 °C
ಷೇರುಪೇಟೆ

ಹೊಸ ಎತ್ತರಕ್ಕೆ ಸೆನ್ಸೆಕ್ಸ್, 12,000 ಗಡಿಯಲ್ಲಿ ನಿಫ್ಟಿ; ಜನ ಮೆಚ್ಚಿದ ಇನ್ಫೊಸಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆ ಸೂಚ್ಯಂಕ

ಬೆಂಗಳೂರು: ದೇಶೀಯ ಷೇರುಪೇಟೆಯಲ್ಲಿ ಬುಧವಾರ ಸಕಾರಾತ್ಮಕ ವಹಿವಾಟಿನ ಪರಿಣಾಮ ಸಂವೇದಿ ಸೂಚ್ಯಂಕ ಹೊಸ ದಾಖಲೆ ಮಟ್ಟವನ್ನು ತಲುಪಿತು. ಮುಂಬೈ ಷೇರುಪೇಟೆಯಲ್ಲಿ ಒಟ್ಟು 1,114 ಷೇರುಗಳು ಏರಿಕೆ ದಾಖಲಿಸಿದ್ದು, 1,045 ಷೇರುಗಳು ಇಳಿಮುಖವಾಗಿವೆ. 

ಷೇರುಪೇಟೆಯಲ್ಲಿ  ವಾರದಿಂದೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟದ ವಹಿವಾಟು ನಡೆಯುತ್ತಿದೆ. ಸಂವೇದಿ ಸೂಚ್ಯಂಕ ಅಲ್ಪ ಏರಿಕೆ ಕಂಡರೂ ಹೊಸ ದಾಖಲೆ ಬರೆಯುವಂತಾಗಿದೆ.

ಸಂವೇದಿ ಸೂಚ್ಯಂಕವು ಮಧ್ಯಾಹ್ನದ ಬಳಿಕ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 40,607 ಅಂಶಗಳಿಗೆ ತಲುಪಿತ್ತು. ದಿನದ ಅಂತ್ಯದಲ್ಲಿ ಸೂಚ್ಯಂಕವು 221 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 40,470 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಬ್ಯಾಂಕಿಂಗ್‌ ಷೇರುಗಳಲ್ಲಿ ಕಂಡುಬಂದ ಉತ್ತಮ ಗಳಿಕೆಯಿಂದಾಗಿ ಸಕಾರಾತ್ಮಕ ವಹಿವಾಟು ನಡೆಯಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 12 ಸಾವಿರದ ಮಟ್ಟವನ್ನು ತಲುಪಿತ್ತು. ಆದರೆ, ಅಂತಿಮವಾಗಿ 44 ಅಂಶಗಳ ಗಳಿಕೆಯೊಂದಿಗೆ 11,961 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಶೇ 3ರಷ್ಟು ಏರಿಕೆ ದಾಖಲಿಸಿದ ಇನ್ಫೊಸಿಸ್‌ ಷೇರು ₹718 ಮುಟ್ಟಿತು. ಅನಾಮಧೇಯರು ಸಂಸ್ಥೆಯ ಸಹಸಂಸ್ಥಾಪಕರು ಹಾಗೂ ಮಾಜಿ ಉದ್ಯೋಗಿಗಳ ವಿರುದ್ಧ ಮಾಡಿರುವ ಆರೋಪಗಳನ್ನು ಇನ್ಫೊಸಿಸ್‌ ಖಂಡಿಸಿ ಪ್ರಕಟಣೆ ಹೊರಡಿಸಿತ್ತು. ಈ ಬೆಳವಣಿಗೆಯ ಬಳಿಕ ಇನ್ಫೊಸಿಸ್‌ ಷೇರುಗಳತ್ತ ಹೂಡಿಕೆದಾರರು ಮತ್ತಷ್ಟು ಆಕರ್ಷಿತರಾಗಿದ್ದಾರೆ. ಕೊಟಾಕ್‌ ಮಹೀಂದ್ರಾ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಲಾರ್ಸೆನ್‌ ಆ್ಯಂಡ್‌ ಟರ್ಬೊ, ಸನ್‌ ಫರ್ಮಾ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಉತ್ತಮ ಏರಿಕೆ ಕಂಡಿವೆ. 

ಗೋದ್ರೆಜ್‌ ಗ್ರಾಹಕ ಉತ್ಪನ್ನಗಳ ತ್ರೈಮಾಸಿಕ ಲಾಭಾಂಶ ಗಳಿಕೆ ಪ್ರಕಟವಾಗಿದ್ದು, ಗೋದ್ರೆಜ್‌ ಷೇರು ಶೇ 5ರಷ್ಟು ಹೆಚ್ಚಳವಾಗಿ ₹758 ತಲುಪಿದೆ. 

ಗರಿಷ್ಠ ಗಳಿಕೆ: ಐಸಿಐಸಿಐ ಬ್ಯಾಂಕ್‌, ಇನ್ಫೊಸಿಸ್‌, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಮೋಟರ್ಸ್‌, ಕೋಟಕ್‌ ಬ್ಯಾಂಕ್, ಆ್ಯಕ್ಸಿಸ್‌ ಬ್ಯಾಂಕ್‌, ಎಲ್‌ಆ್ಯಂಡ್‌ಟಿ, ಯೆಸ್‌ ಬ್ಯಾಂಕ್‌ ಮತ್ತು ಎಚ್‌ಯುಎಲ್‌ ಷೇರುಗಳು ಶೇ 2.64ರವರೆಗೂ ಏರಿಕೆ ಕಂಡಿವೆ.

ನಷ್ಟ: ಭಾರ್ತಿ ಏರ್‌ಟೆಲ್‌, ರಿಲಯನ್ಸ್‌, ಬಜಾಜ್‌ ಫೈನಾನ್ಸ್‌, ಒಎನ್‌ಜಿಸಿ, ಎಚ್‌ಸಿಎಲ್‌ ಟೆಕ್‌, ಐಟಿಸಿ ಮತ್ತು ಸನ್‌ ಫಾರ್ಮಾ ಷೇರುಗಳು ಶೇ 3.31ರವರೆಗೆ ಇಳಿಕೆಯಾಗಿವೆ.

ಸಕಾರಾತ್ಮಕ ಅಂಶಗಳು

ನಿರೀಕ್ಷೆಗಿಂತ ಉತ್ತಮ ತ್ರೈಮಾಸಿಕ ಫಲಿತಾಂಶ

ಇನ್ನೊಂದು ಹಂತದ ಆರ್ಥಿಕ ಉತ್ತೇಜನಾ ಕ್ರಮ ಜಾರಿಯಾಗುವ ವಿಶ್ವಾಸ

ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆ

ಗರಿಷ್ಠ ಮಟ್ಟ (ಅಂಶಗಳಲ್ಲಿ)

ಜೂನ್‌ 3- 40,267

ಜೂನ್‌ 4- 40,083

ಅಕ್ಟೋಬರ್‌ 30- 40,052

ಅಕ್ಟೋಬರ್‌ 31- 40,129

ನವೆಂಬರ್‌ 4- 40,302

ನವೆಂಬರ್‌ 5- 40,248

ನವೆಂಬರ್‌ 6- 40,607

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು