ಗುರುವಾರ , ನವೆಂಬರ್ 14, 2019
19 °C
ಷೇರುಪೇಟೆ ಸೂಚ್ಯಂಕ

ಬಜೆಟ್‌ ಮಂಡನೆಯಾಗುತ್ತಿದ್ದಂತೆ ಏರಿ ಕುಸಿದ ಷೇರುಪೇಟೆ; 395 ಅಂಶ ಇಳಿಕೆ

Published:
Updated:

ಮುಂಬೈ: ಮೋದಿ ಸರ್ಕಾರದ 2019–20ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ನಡೆದಿಲ್ಲ ಎಂಬ ಭಾವನೆ ದಟ್ಟವಾಗುತ್ತಿದ್ದಂತೆ ಷೇರುಪೇಟೆ ಕುಸಿತ ಕಂಡಿತು. 

ಆರಂಭದಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 40,000 ಅಂಶಗಳ ಗಡಿ ದಾಟಿತು. 40,032 ಅಂಶಗಳ ವರೆಗೂ ಏರಿಕೆ ಕಂಡ ಸೂಚ್ಯಂಕ 500 ಅಂಶಗಳು ಕುಸಿಯಿತು. ಗುರುವಾರ 39,908 ಅಂಶಗಳಿದ್ದ ಸೂಚ್ಯಂಕ ಶುಕ್ರವಾರ ಬಜೆಟ್‌ ಮಂಡನೆಯ ನಂತರ 395 ಅಂಶ ಕುಸಿತದೊಂದಿಗೆ 39,513ರಲ್ಲಿ ವಹಿವಾಟು ಅಂತ್ಯ ಗೊಂಡಿದೆ. 

ನಿಫ್ಟಿ50 ಷೇರುಗಳ ಪೈಕಿ ಯೆಸ್‌ ಬ್ಯಾಂಕ್‌, ಎನ್‌ಟಿಪಿಸಿ, ಯುಪಿಎಲ್‌, ಎಂಆ್ಯಂಡ್‌ಎಂ ಮತ್ತು ವೇದಾಂತ ಕಂಪನಿ ಷೇರುಗಳು ಅತಿ ಹೆಚ್ಚು ಶೇ.4–8ರಷ್ಟು ಕುಸಿತ ಕಂಡಿವೆ. ಇಂಡಿಯಾಬುಲ್ಸ್‌ ಹೌಸಿಂಗ್‌, ಇಂಡಸ್‌ಇಂಡ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಹಾಗೂ ಎಸ್‌ಬಿಐ ಷೇರುಗಳು ಶೇ.1–3ರಷ್ಟು ಏರಿಕೆಯಾಗಿವೆ. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 135.60 ಅಂಶ ಇಳಿಕೆಯೊಂದಿಗೆ 11,811.20 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು. 

ಎಸ್ಕಾರ್ಟ್ಸ್‌, ಅದಾನಿ ಎಂಟರ್‌ಪ್ರೈಸಸ್‌, ಜೈನ್‌ ಇರಿಗೇಷನ್‌, ಅಲಹಾಬಾದ್‌ ಬ್ಯಾಂಕ್‌, ಬಿಇಎಲ್‌, ಡಿಎಲ್‌ಎಫ್‌ ಹಾಗೂ ಇಂಟರ್‌ಗ್ಲೋಬ್‌ ಏವಿಯೇಷನ್‌ ಷೇರುಗಳು ದಿಢೀರ್‌ ಕುಸಿತ ಕಂಡವು. 

ಪ್ರತಿಕ್ರಿಯಿಸಿ (+)