ಶುಕ್ರವಾರ, ಡಿಸೆಂಬರ್ 13, 2019
19 °C
ದೇಶಿ, ಜಾಗತಿಕ ವಿದ್ಯಮಾನಗಳ ಪರಿಣಾಮ

ಷೇರುಪೇಟೆ ಸೂಚ್ಯಂಕ 229 ಅಂಶ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Sensex Nifty

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಬುಧವಾರ ನಕಾರಾತ್ಮಕ ವಹಿವಾಟು ನಡೆಯಿತು.

ಗುರುನಾನಕ್‌ ಜಯಂತಿ ಪ್ರಯುಕ್ತ ಮಂಗಳವಾರ ವಹಿವಾಟಿಗೆ ರಜೆ ಇತ್ತು. ಬುಧವಾರ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಗರಿಷ್ಠ ಮಟ್ಟದಲ್ಲಿಯೇ ವಹಿವಾಟು ಆರಂಭಿಸಿತು. ಒಂದ ಹಂತದಲ್ಲಿ 40,444 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು. ಆದರೆ ನಂತರ ಇಳಿಮುಖ ಹಾದಿ ಹಿಡಿಯಿತು. ವಹಿವಾಟಿನ ಅಂತ್ಯದ ವೇಳೆಗೆ 229 ಅಂಶಗಳ ಇಳಿಕೆಯೊಂದಿಗೆ, 40,116 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 73 ಅಂಶ ಇಳಿಕೆಯಾಗಿ 11,840 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ನಷ್ಟ: ಯೆಸ್‌ ಬ್ಯಾಂಕ್‌ ಷೇರುಗಳು ಶೇ 6.51ರಷ್ಟು ಗರಿಷ್ಠ ನಷ್ಟ ಅನುಭವಿಸಿವೆ. ಎಸ್‌ಬಿಐ, ಆ್ಯಕ್ಸಿಸ್‌ ಬ್ಯಾಂಕ್‌, ವೇದಾಂತ, ಸನ್‌ ಫಾರ್ಮಾ, ಐಸಿಐಸಿಐ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಐಟಿಸಿ, ಇನ್ಫೊಸಿಸ್‌ ಮತ್ತು ಟೆಕ್‌ ಮಹೀಂದ್ರಾ ಷೇರುಗಳು ಶೇ 3.69ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಯುಎಲ್‌, ಮಾರುತಿ ಮತ್ತು ಎನ್‌ಟಿಪಿಸಿ ಷೇರುಗಳು ಶೇ 3.76ರವರೆಗೂ ಏರಿಕೆ ಕಂಡುಕೊಂಡಿವೆ.

ಇಳಿಕೆಗೆ ಕಾರಣಗಳು

ಕೈಗಾರಿಕಾ ಉತ್ಪಾದನೆಯಲ್ಲಿ ಇಳಿಕೆ

ಜಿಡಿಪಿ ವೃದ್ಧಿ ದರ ತಗ್ಗಿಸಿದ ಎಸ್‌ಬಿಐ ವರದಿ

ಅಮೆರಿಕ–ಚೀನಾ ವಾಣಿಜ್ಯ ಒಪ್ಪಂದದ ಬಗೆಗೆ ಮೂಡಿರುವ ಗೊಂದಲ

ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ

ರೂಪಾಯಿ ಮೌಲ್ಯದಲ್ಲಿ ಆಗಿರುವ ಇಳಿಕೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು