ಭಾನುವಾರ, ನವೆಂಬರ್ 17, 2019
28 °C

ದಾಖಲೆಗಳ ವಹಿವಾಟಿನ ವಾರ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ವಾರವಿಡೀ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಯಿತು.  ಹೀಗಿದ್ದರೂ ವಾರದ ಅಂತ್ಯದಲ್ಲಿ ಸೂಚ್ಯಂಕ ಭಾರಿ ಗಳಿಕೆಯನ್ನೇನೂ ಕಾಣಲಿಲ್ಲ. 

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ವಾರದ ವಹಿವಾಟಿನಲ್ಲಿ 159 ಅಂಶ ಹೆಚ್ಚಾಗಿ 40,323 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.‌ ನಿಫ್ಟಿ 18 ಅಂಶ ಹೆಚ್ಚಾಗಿ, 11908ಅಂಶಗಳಿಗೆ ತಲುಪಿತು.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 1.38 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹154.10 ಲಕ್ಷ ಕೋಟಿಗಳಿಂದ ₹152.72 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಪ್ರತಿಕ್ರಿಯಿಸಿ (+)