ಶುಕ್ರವಾರ, ಡಿಸೆಂಬರ್ 6, 2019
20 °C
ಪ್ರಮುಖ 7 ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಏರಿಕೆ

ಟಿಸಿಎಸ್‌ ಕಂಪನಿ ಗಳಿಕೆ ಗರಿಷ್ಠ

Published:
Updated:

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 10 ಕಂಪನಿಗಳಲ್ಲಿ 7 ಕಂಪನಿಗಳ ಮಾರುಕಟ್ಟೆ ಮೌಲ್ಯ ₹ 76,998 ಕೋಟಿಗಳಷ್ಟು ಏರಿಕೆಯಾಗಿದೆ.

ಅಕ್ಟೋಬರ್‌ 21ರಿಂದ 25ರವರೆಗೆ ನಡೆದಿರುವ ವಹಿವಾಟಿನಲ್ಲಿ ಐಟಿ ಸೇವೆಗಳನ್ನು ರಫ್ತು ಮಾಡುವ ಪ್ರಮುಖ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಮಾರುಕಟ್ಟೆ ಮೌಲ್ಯ ₹ 25,403.64 ಕೋಟಿಗಳಷ್ಟು ಗರಿಷ್ಠ ಏರಿಕೆ ಕಂಡಿದ್ದು, ₹ 7.97 ಲಕ್ಷ ಕೋಟಿಗಳಿಗೆ ತಲುಪಿದೆ.

ಮೊದಲ ಸ್ಥಾನದಲ್ಲಿ ಆರ್‌ಐಎಲ್‌: ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಮೊದಲ ಸ್ಥಾನ ಕಾಯ್ದುಕೊಂಡಿದೆ. 

ವಾರದ ವಹಿವಾಟಿನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ₹ 9,762.29 ಕೋಟಿಗಳಷ್ಟು ಹೆಚ್ಚಾಗಿ ₹ 9.06 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಮತ್ತು ಇನ್ಫೊಸಿಸ್‌ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆ ಆಗಿದೆ.

ಇನ್ಫೊಸಿಸ್‌ ಸಿಇಒ ಮತ್ತು ಸಿಎಫ್‌ಒ ವಿರುದ್ಧ ಆರೋಪ ಕೇಳಿಬಂದಿರುವುದರಿಂದ ಕಂಪನಿ ಷೇರುಗಳು ಮಂಗಳವಾರದ ವಹಿವಾಟಿನಲ್ಲಿ
ಶೇ 17ರಷ್ಟು ಗರಿಷ್ಠ ನಷ್ಟ ಅನುಭವಿಸಿದ್ದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು