ಮಾರಾಟ ಒತ್ತಡಕ್ಕೆ ಸೂಚ್ಯಂಕ ಕುಸಿತ

7
ದುರ್ಬಲ ರೂಪಾಯಿ, ಕಚ್ಚಾ ತೈಲ ಬೆಲೆ ಏರಿಕೆ

ಮಾರಾಟ ಒತ್ತಡಕ್ಕೆ ಸೂಚ್ಯಂಕ ಕುಸಿತ

Published:
Updated:

ಮುಂಬೈ: ದಿನದ ವಹಿವಾಟಿನಲ್ಲಿ ಆರಂಭಿಕ ಗಳಿಕೆಗೆ ಎರವಾದ ಷೇರುಪೇಟೆ ಸಂವೇದಿ ಸೂಚ್ಯಂಕವು ವಾಹನ, ರಿಯಲ್‌ ಎಸ್ಟೇಟ್‌, ತೈಲ, ಅನಿಲ ಮತ್ತು ಬ್ಯಾಂಕ್‌ ಷೇರುಗಳಲ್ಲಿನ ಮಾರಾಟ ಒತ್ತಡದ ಫಲವಾಗಿ ಅಂತ್ಯದಲ್ಲಿ 175 ಅಂಶಗಳಿಗೆ ಎರವಾಯಿತು. 

ಪೇಟೆಯಲ್ಲಿ ವಹಿವಾಟಿನ ಏರಿಳಿತವು ಮಂಗಳವಾರವೂ ಮುಂದುವರಿಯಿತು. ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರದ ಕಾರಣಕ್ಕೆ ಜಾಗತಿಕ ಆರ್ಥಿಕತೆಯ ಪ್ರಗತಿ ಕುಂಠಿತಗೊಳ್ಳಲಿದೆ ಎನ್ನುವ ಐಎಂಎಫ್‌ನ ವರದಿಯು ವಹಿವಾಟಿನ ಮೇಲೆ ಪರಿಣಾಮ ಬೀರಿತು. ವಿದೇಶಿ ಬಂಡವಾಳದ ಹೊರ ಹರಿವು ಕೂಡ ಖರೀದಿ ಉತ್ಸಾಹಕ್ಕೆ ತಣ್ಣೀರೆರಚಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 33 ಪೈಸೆಗಳಿಗೆ ಎರವಾಗಿರುವುದು ಮತ್ತು ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಪೇಟೆಯಲ್ಲಿ ನಿರುತ್ಸಾಹ ಮೂಡಿಸಿದೆ. ದಿನದ ಅಂತ್ಯದಲ್ಲಿ ಸೂಚ್ಯಂಕವು 175 ಅಂಶಗಳ ನಷ್ಟ ಕಂಡು 34,299 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 47 ಅಂಶಗಳಿಗೆ ಎರವಾಗಿ 10,301 ಅಂಶಗಳಲ್ಲಿ ಅಂತ್ಯಕಂಡಿತು.

 ಗೃಹಬಳಕೆ ಉತ್ಪನ್ನ, ವಾಹನ, ತೈಲ, ಅನಿಲ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ, ರಿಯಲ್‌ ಎಸ್ಟೇಟ್‌, ಕೇಂದ್ರೋದ್ಯಮ ಮತ್ತು ಬ್ಯಾಂಕ್‌ ಷೇರುಗಳಲ್ಲಿ ಹೆಚ್ಚಿನ ಮಾರಾಟ ಕಂಡು ಬಂದಿತು. ಟಾಟಾ ಮೋಟರ್ಸ್‌ ಷೇರು ಗರಿಷ್ಠ ಮಟ್ಟದ ನಷ್ಟಕ್ಕೆ (ಶೇ 13.40) ಗುರಿಯಾಯಿತು. ಅದಾನಿ ಪೋರ್ಟ್ಸ್‌ ಶೇ 4.52ರಷ್ಟು ಏರಿಕೆ ಕಂಡಿತು. ಲೋಹ, ಆರೋಗ್ಯ, ತಂತ್ರಜ್ಞಾನ ಮತ್ತು ಐ.ಟಿ ಕ್ಷೇತ್ರದ ಷೇರುಗಳು ಲಾಭ ಮಾಡಿಕೊಂಡವು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !