ಷೇರುಪೇಟೆ: ತೈಲ ಮಾರಾಟ ಕಂಪನಿಗಳ ಷೇರುಗಳಲ್ಲಿ ಶೇ.28 ಕುಸಿತ    

7

ಷೇರುಪೇಟೆ: ತೈಲ ಮಾರಾಟ ಕಂಪನಿಗಳ ಷೇರುಗಳಲ್ಲಿ ಶೇ.28 ಕುಸಿತ    

Published:
Updated:

ಮುಂಬೈ: ಷೇರುಪೇಟೆ ಸೂಚ್ಯಂಕ ಕುಸಿತ ಮುಂದುವರಿದಿದೆ. ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಸೂಚ್ಯಂಕ 144 ಅಂಕ ಕುಸಿತ ಕಂಡು 35025ರಲ್ಲಿಯೂ ನಿಫ್ಟಿ ಸೂಚ್ಯಂಕ 80 ಅಂಕ ಕುಸಿತ ಕಂಡು 10518 ಅಂಕದಲ್ಲಿದೆ.

ಮುಂಬೈ ಷೇರುಪೇಟೆಯಲ್ಲಿ 805 ಕಂಪನಿಗಳ ಷೇರುಗಳು ಲಾಭ ಕಂಡುಕೊಂಡಿದ್ದರೆ 735 ಷೇರುಗಳು ನಷ್ಟ ಅನುಭವಿಸಿವೆ.

ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದರಿಂದ ತೈಲ ಮಾರಾಟ ಕಂಪನಿಗಳ ಷೇರುಗಳು ಶೇ. 28 ಕುಸಿತ ಕಂಡಿವೆ.

ಇಂಡಿಯಾ ಬುಲ್ ಹೌಸಿಂಗ್,  ಐಷೇರ್ ಮೊಟಾರ್ಸ್, ಇನ್ಫೋಸಿಸ್, ಎಸ್‍ಸಿಎಲ್ ಟೆಕ್, ಟಿಸಿಎಸ್, ಸಿಪ್ಲಾ, ಭಾರ್ತಿ ಏರ್‍‍ಟೆಲ್, ಸನ್ ಫಾರ್ಮಾ, ಯೆಸ್ ಬ್ಯಾಂಕ್, ಡಾ.ರೆಡ್ಡೀಸ್ ಲ್ಯಾಬ್, ವಿಪ್ರೊ ಮೊದಲಾದ ಕಂಪನಿಗಳು ಲಾಭಗಳಿಸಿವೆ.

ಒಎನ್‍ಜಿಸಿ, ಹಿಂಡಲ್ಕೊ, ವೇದಾಂತ, ಬಜಾಜ್ ಆಟೋ, ಹಿಂದೂಸ್ತಾನ್ ಯುನಿಲಿವರ್, ಐಟಿಸಿ, ರಿಲಾಯನ್ಸ್, ಎಸ್‍ಬಿಐ, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಎಚ್‍ಡಿಎಫ್‌‍ಸಿ ಮೊದಲಾದ ಕಂಪನಿಗಳ ಷೇರು ನಷ್ಟದಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ದ್ವಿ- ಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಸಲಿದೆ. ಕಚ್ಚಾ ತೈಲ ಬೆಲೆ ಏರಿಕೆಯಾಗಿ ರೂಪಾಯಿ ಮೌಲ್ಯ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ರೆಪೋ ದರವನ್ನು 25 ಮೂಲಾಂಕ ತಗ್ಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !