ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ಸಂಸ್ಥೆಗಳ ಷೇರು ಕುಸಿತ

ಅಪಾರ್ಟ್‌ಮೆಂಟ್‌ ನಿರ್ಮಾಣ ನಿಷೇಧ ಚಿಂತನೆ
Last Updated 28 ಜೂನ್ 2019, 18:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ಮೇಲೆ 5 ವರ್ಷಗಳ ಕಾಲ ನಿಷೇಧ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದರಿಂದ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಸಂಸ್ಥೆಗಳ ಷೇರುಗಳ ಬೆಲೆ ಕುಸಿತ ಕಂಡಿವೆ.

ಮುಂಬೈ ಷೇರುಪೇಟೆಯ ಶುಕ್ರವಾರದ ವಹಿವಾಟಿನಲ್ಲಿ ಈ ರಿಯಾಲ್ಟಿ ಸಂಸ್ಥೆಗಳ ಷೇರುಗಳು ಶೇ 5.35ರವರೆಗೆ ಕುಸಿತ ದಾಖಲಿಸಿವೆ.

ಶೋಭಾ ಲಿಮಿಟೆಡ್‌ ಷೇರು ಬೆಲೆ ಶೇ 1.81ರಷ್ಟು ಕಡಿಮೆಯಾಗಿ ₹ 535.40ಕ್ಕೆ ಇಳಿದಿದೆ. ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರಾಜೆಕ್ಟ್‌ ಲಿಮಿಟೆಡ್‌ನ ಪ್ರತಿ ಷೇರಿನ ಬೆಲೆ ಶೇ 3.67ರಷ್ಟು ಕಡಿಮೆಯಾಗಿ ₹ 268.10ಕ್ಕೆ ಇಳಿದಿದೆ.

ಬ್ರಿಗೇಡ್‌ ಎಂಟರ್‌ಪ್ರೈಸಿಸ್‌ ಲಿಮಿಟೆಡ್‌ನ ಷೇರು ಶೇ 2.82ರಷ್ಟು ಕಡಿಮೆಯಾಗಿ ₹ 258ಕ್ಕೆ ತಲುಪಿದೆ. ಪುರವಂಕರ ಲಿಮಿಟೆಡ್‌ನ ಷೇರು ಶೇ 5.35ರಷ್ಟು ಕಡಿಮೆಯಾಗಿ ದಿನದಂತ್ಯದ ವಹಿವಾಟನ್ನು ₹ 69.90ರಲ್ಲಿ ಕೊನೆಗೊಳಿಸಿತು.

ಈ ಪ್ರಸ್ತಾವ ಜಾರಿಗೆ ಬರುವ ಸಾಧ್ಯತೆ ಕಡಿಮೆ ಇದೆ. ಕಟ್ಟಡ ನಿರ್ಮಾಣ ಚಟುವಟಿಕೆಗೆ ಸಂಬಂಧಿಸಿದ ಇತರ ವಲಯಗಳಿಂದಲೂ ಸರ್ಕಾರಕ್ಕೆ ವರಮಾನ ಹರಿದು ಬರುತ್ತದೆ. ಈ ವರಮಾನ ಕಳೆದುಕೊಳ್ಳಲು ಸರ್ಕಾರ ಮುಂದಾಗಲಿಕ್ಕಿಲ್ಲ ಎಂದು ರಿಯಲ್‌ ಎಸ್ಟೇಟ್‌ ಪರಿಣತರೊಬ್ಬರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT