ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಫ್‌ ನಿರ್ವಹಣಾ ಸಂಪತ್ತು: ಸಣ್ಣ ಪಟ್ಟಣಗಳ ಕೊಡುಗೆ ಶೇ 16ರಷ್ಟು

Last Updated 22 ನವೆಂಬರ್ 2020, 16:40 IST
ಅಕ್ಷರ ಗಾತ್ರ

ನವದೆಹಲಿ: ಮ್ಯೂಚುವಲ್‌ ಫಂಡ್‌ ಉದ್ಯಮದ ಒಟ್ಟಾರೆ ನಿರ್ವಹಣಾ ಸಂಪತ್ತಿನಲ್ಲಿ ಸಣ್ಣ ಪಟ್ಟಣಗಳ ಕೊಡುಗೆಯು ಅಕ್ಟೋಬರ್‌ ತಿಂಗಳ ಅಂತ್ಯಕ್ಕೆ ಶೇ 16ರಷ್ಟಾಗಿದೆ ಎಂದು ಭಾರ ತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ ಮಾಹಿತಿ ನೀಡಿದೆ.

ಉದ್ಯಮದ ಒಟ್ಟಾರೆ ನಿರ್ವ ಹಣಾ ಸಂಪತ್ತು ₹ 28.34 ಲಕ್ಷ ಕೋಟಿಗಳಷ್ಟಿದೆ. ಇದರಲ್ಲಿ ಸಣ್ಣ ಪಟ್ಟಣಗಳ ಪಾಲು ಅಕ್ಟೋಬರ್‌ ತಿಂಗಳ ಅಂತ್ಯಕ್ಕೆ ₹ 4.61 ಲಕ್ಷ ಕೋಟಿಗಳಷ್ಟಾಗಿದೆ. ಸೆಪ್ಟೆಂಬರ್‌ ಅಂತ್ಯದಲ್ಲಿ ₹ 4.47 ಲಕ್ಷ ಕೋಟಿಗಳಷ್ಟಿತ್ತು. ಈ ರೀತಿ ಉದ್ಯಮಕ್ಕೆ ಕೊಡುಗೆ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (ಶೇ 43.8) ಮೊದಲ ಸ್ಥಾನದಲ್ಲಿದೆ. ನವದೆಹಲಿ (ಶೇ 8.4), ಗುಜರಾತ್‌ (ಶೇ 6.9) ಹಾಗೂ ಕರ್ನಾಟಕ (ಶೇ 5.2) ನಂತರದ ಸ್ಥಾನದಲ್ಲಿವೆ.

ಸಣ್ಣ ಪಟ್ಟಣಗಳಲ್ಲಿ ತಮ್ಮ ನಿರ್ವ ಹಣಾ ಸಂಪತ್ತು ಹೆಚ್ಚಿಸಿಕೊಳ್ಳುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ಕಳೆದ ಕೆಲವು ವರ್ಷ ಗಳಿಂದ ಮ್ಯೂಚವಲ್‌ ಸಂಸ್ಥೆಗಳಿಗೆ ಉತ್ತೇಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT