ಮಂಗಳವಾರ, ಆಗಸ್ಟ್ 20, 2019
21 °C

ಷೇರುಪೇಟೆಯಲ್ಲಿ ಖರೀದಿ ಉತ್ಸಾಹ

Published:
Updated:

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ಗುರುವಾರದ ವಹಿವಾಟಿನಲ್ಲಿ ಖರೀದಿ ಉತ್ಸಾಹ ಕಂಡು ಬಂದಿದ್ದರಿಂದ ಸಂವೇದಿ ಸೂಚ್ಯಂಕವು 637 ಅಂಶ ಗಮನಾರ್ಹ ಏರಿಕೆ ಕಂಡಿತು.

ಷೇರುಪೇಟೆಯಲ್ಲಿ ಮಾರಾಟ ಒತ್ತಡಕ್ಕೆ ಕಾರಣವಾಗಿರುವ ಬಜೆಟ್‌ನಲ್ಲಿನ ತೆರಿಗೆ ಪ್ರಸ್ತಾವ ಕೈಬಿಡುವ ಬಗ್ಗೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಕಂಡು ಬಂದಿರುವುದರಿಂದ ಖರೀದಿ ಉತ್ಸಾಹ ಕಂಡು ಬಂದಿತು. ಬ್ಯಾಂಕಿಂಗ್‌, ಐ.ಟಿ, ಮತ್ತು ಇಂಧನ ವಲಯದ ಷೇರುಗಳ ನೇತೃತ್ವದಲ್ಲಿ  ಸೂಚ್ಯಂಕವು ಗಮನಾರ್ಹ ಚೇತರಿಕೆ ದಾಖಲಿಸಿತು.

ವಹಿವಾಟುದಾರರ ಆತ್ಮವಿಶ್ವಾಸ ವೃದ್ಧಿಸುವ ಮತ್ತು ಆರ್ಥಿಕತೆಗೆ ಪುನಶ್ಚೇತನ ನೀಡುವ ಸಂಬಂಧ ಸರ್ಕಾರ ಭರವಸೆಯ ಮಾತು ಆಡಿರುವುದು  ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ.

Post Comments (+)