ಗುರುವಾರ , ಅಕ್ಟೋಬರ್ 17, 2019
24 °C

ಮಾರಾಟದ ಒತ್ತಡ ಸೂಚ್ಯಂಕ ಇಳಿಕೆ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಬ್ಯಾಂಕಿಂಗ್‌, ವಾಹನ ಮತ್ತು ಲೋಹ ವಲಯದ ಷೇರುಗಳು ಗುರುವಾರ ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ನಕಾರಾತ್ಮಕ ವಹಿವಾಟು ನಡೆಯುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಒಂದು ಹಂತದಲ್ಲಿ 375 ಅಂಶಗಳವರೆಗೂ ಇಳಿಕೆಯಾಗಿತ್ತು. ನಂತರ ವಹಿವಾಟು ತುಸು ಚೇತರಿಕೆ ಕಂಡಿದ್ದರಿಂದ 298 ಅಂಶಗಳ ಇಳಿಕೆಯೊಂದಿಗೆ 37,880 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗಳಿಕೆ: ರಿಲಯನ್ಸ್‌ ಜಿಯೊ ಕಂಪನಿಯು ಬೇರೆ ನೆಟ್‌ವರ್ಕ್‌ಗೆ ಕರೆ ಮಾಡುವುದಕ್ಕೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ಆರಂಭಿಸಿದೆ. ಇದರಿಂದ ಏರ್‌ಟೆಲ್‌ ಮತ್ತು ವೊಡಾಫೋನ್‌ ಕಂಪನಿಯ ಷೇರುಗಳು ಗುರುವಾರದ ವಹಿವಾಟಿನಲ್ಲಿ ಶೇ 6ರವರೆಗೂ ಗಳಿಕೆ ಕಂಡುಕೊಂಡವು.

Post Comments (+)